ಕಳಮಶ್ಶೇರಿ ಸ್ಫೋಟ: ಇನ್ನೋರ್ವ ಮೃತ್ಯು
ಕೊಚ್ಚಿ: ಕಳಮಶ್ಶೇರಿಯಲ್ಲಿ ಯಹೋವನ ವಲಯ ಸಮಾವೇಶ ವೇಳೆ ನಡೆದ ಬಾಂಬ್ ಸ್ಫೋಟದಲ್ಲಿ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಇನ್ನೋರ್ವ ಮೃತಪಟ್ಟನು. ಮಲಯಾಟೂರು ಕಡವನ್ ಕುಡಿ ನಿವಾಸಿ ಪ್ರದೀಪನ್ ಎಂಬವರ ಪುತ್ರ ಪ್ರವೀಣ್ ಪ್ರದೀಪ್ (೨೩) ಮೃತಪಟ್ಟ ವ್ಯಕ್ತಿ. ಇದರೊಂದಿಗೆ ಈ ಸ್ಫೋಟದಿಂದ ಸಾವಿಗೀಡಾದವರ ಸಂಖ್ಯೆ ಆರಕ್ಕೇರಿದೆ.
ಸ್ಫೋಟದಲ್ಲಿ ಗಾಯಗೊಂಡಿದ್ದ ಪ್ರವೀಣ್‌ರ ತಾಯಿ ರೀನ ಜೋಸ್ (೪೫), ಸಹೋದರಿ ಲಿಬಿನ (೧೨) ಎಂಬಿವರು ಇತ್ತೀಚೆಗೆ ಮೃತಪಟ್ಟಿದ್ದರು. ಅಕ್ಟೋಬರ್ ೨೯ರಂದು ಬೆಳಿಗ್ಗೆ ೯ ಗಂಟೆ ವೇಳೆ ಹಾಲ್‌ನೊಳಗೆ ಸ್ಫೋಟ ನಡೆದಿದೆ. ಸ್ಫೋಟ ವೇಳೆ ಹಾಲ್‌ನಲ್ಲಿ ಎರಡು ಸಾವಿರಕ್ಕೂ ಹೆಚ್ಚುಮಂದಿ ಯಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಡೊಮಿನಿಕ್ ಮಾರ್ಟಿನ್ ಎಂಬಾತನನ್ನು ಬಂಧಿಸಲಾಗಿದೆ.