ಕಳ್ಳಭಟ್ಟಿ ಸಾರಾಯಿ ವಶ; ಓರ್ವ ಸೆರೆ
ಕಾಸರಗೋಡು: ಲೋಕಸಭಾ ಚುನಾವಣೆಗೆ ಸಂಬಂಧಿಸಿ ಎಪ್ರಿಲ್ ೨೫ರಿಂದ ಎರಡು ದಿನಗಳ ತನಕ ಡ್ರೈ ಡೇ ಆರಂಭಗೊಳ್ಳಲಿರು ವಂತೆಯೇ ಆ ಪ್ರಯುಕ್ತ ಅಬಕಾರಿ ತಂಡದವರು ಚೆಂಗಳ ಬಳಿ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಏಳು ಲೀಟರ್ ಕಳ್ಳಭಟ್ಟಿ ಸಾರಾಯಿ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.
ಇದಕ್ಕೆ ಸಂಬಂಧಿಸಿ ಚೆಂಗಳ ಬಾರಿಕ್ಕಾಡ್ ನಿವಾಸಿ ಕೃಷ್ಣ ಪಿ.ಬಿ. (೬೫) ಎಂಬಾತನನ್ನು ಬಂಧಿಸಿ ಆತನ ವಿರುದ್ಧ ಅಬಕಾರಿ ಪ್ರಕರಣ ದಾಖಲಿಸಲಾಗಿದೆ.
ಅಬಕಾರಿ ಇಲಾಖೆಯ ಗುಪ್ತ ಚರ ವಿಭಾಗದ ಪ್ರಿವೆಂಟಿವ್ ಆಫೀಸರ್ ಬಿಜೊರಿಗೆ ಲಭಿಸಿದ ಗುಪ್ತ ಮಾಹಿತಿಯಂತೆ ಕಾಸರಗೋ ಡು ಅಬಕಾರಿ ರೇಂಜ್ ಕಚೇರಿಯ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್) ಜೋಸಫ್ ಜೆ.ಯು ರ ನೇತೃತ್ವದಲ್ಲಿ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್) ಎ.ವಿ. ರಾಜೀವನ್, ಪ್ರಿವೆಂಟಿವ್ ಆಫೀಸರ್‌ಗಳಾದ ಉಣ್ಣಿಕೃಷ್ಣನ್ ಕೆ., ರಂಜಿತ್ ಕೆ.ವಿ., ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಕಣ್ಣನ್‌ಕುಂಞಿ ಮತ್ತು ಫಸೀಲಾ ಎಂಬವರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದೆ. ಬಂಧಿತ ಆರೋಪಿಯನ್ನು ನಂತರ ನ್ಯಾಯಾ ಲಯದ ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಡ್ರೈ-ಡೇ ದಿನಗಳಂದು ಮಾರಾಟ ಮಾಡ ಲೆಂದು ಈ ಮಾಲು ಬಚ್ಚಿಡ ಲಾಗಿತ್ತೆಂದು ಸಂಶಯಿಸಲಾಗುತ್ತಿದೆ ಎಂದು ಅಬಕಾರಿ ಅಧಿಕಾರಿಗಳು ಹೇಳಿದ್ದಾರೆ.