ಕಾಂಗ್ರೆಸ್‌ನ ‘ಸಮರಾಗ್ನಿ’: ನೇತಾರರ ದಂಡು ಆಗಮನ: ಎಲ್ಲೆಡೆ ಬಿಗಿ ಭದ್ರತೆ

ಕಾಸರಗೋಡು: ಕೇಂದ್ರ ಮತ್ತು ರಾಜ್ಯ ಸರಕಾರಗಳನ್ನು   ವಿಚಾರಣೆಗೊಳ ಪಡಿಸುವ ಹೆಸರಲ್ಲಿ  ಕಾಂಗ್ರೆಸ್ ರಾಜ್ಯ ಘಟಕದ ನೇತೃತ್ವದಲ್ಲಿ ನಡೆಸಲಾಗುವ ‘ಸಮರಾಗ್ನಿ’ ಜನಕೀಯ ಚಳವಳಿ ಯಾತ್ರೆಗೆ ಕ್ಷಣಗಣನೆ ಆರಂಭಗೊಂಡಿರು ವಂತೆಯೇ ಅದರಲ್ಲಿ ಭಾಗವಹಿಸಲು ಕಾಂಗ್ರೆಸ್ ನೇತಾರರ ದಂಡು ಇಂದು ಬೆಳಿಗಿ ನಿಂದ ಕಾಸರಗೋಡಿಗೆ ಆಗಮಿಸತೊಡಗಿದೆ.

ಕಾಂಗ್ರೆಸ್‌ನ ಕೇರಳ ಘಟಕ (ಕೆಪಿಸಿಸಿ) ಅಧ್ಯಕ್ಷ ಕೆ. ಸುಧಾಕರನ್ ಮತ್ತು ವಿರೋಧ ಪಕ್ಷ ನಾಯಕ ವಿ.ಡಿ. ಸತೀಶನ್‌ರ ನೇತೃತ್ವದಲ್ಲಿ ನಡೆಯುವ ಈ ಜನಕೀಯ ಪ್ರತಿಭಟನಾ ಆಂದೋಲನ ಯಾತ್ರೆ ಇಂದು ಸಂಜೆ ೪ ಗಂಟೆಗೆ ವಿದ್ಯಾನಗರದಲ್ಲಿರುವ ನಗರಸಭಾ ಕ್ರೀಡಾಂಗಣದಲ್ಲಿ ಉದ್ಘಾಟನೆಗೊಂಡು ತಿರುವನಂತಪುರ ದತ್ತ ಪ್ರಯಾಣ ಆರಂಭಿಸಲಿದೆ. ಇದರ ಅಂಗವಾಗಿ ರಾಜ್ಯದ ಎಲ್ಲಾ ೧೪ ಜಿಲ್ಲೆಗಳಲ್ಲಾಗಿ ೩೦ ಸಮ್ಮೇಳನಗಳನ್ನು ನಡೆಸಲಾಗುವುದು. ಇಂದು ಸಂಜೆ ಆರಂಭಗೊಳ್ಳುವ ಸಮರಾಗ್ನಿ ಆಂದೋ ಲನವನ್ನು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲನ್ ಉದ್ಘಾಟಿಸುವರು. ಹಲವು ನೇತಾರರು ಭಾಗವಹಿಸಿ ಮಾತನಾಡುವರು.

ಸಮರಾಗ್ನಿ ಆಂದೋಲನದಂ ಗವಾಗಿ ಕಾಸರಗೋಡು, ವಿದ್ಯಾನಗರ ಸೇರಿದಂತೆ ಈ ಯಾತ್ರೆ ಹಾದು ಹೋಗುವ ಎಲ್ಲಾ ರಸ್ತೆಗಳನ್ನು ಕಾಂಗ್ರೆಸ್‌ನ ಪತಾಕೆ ಇತ್ಯಾದಿಗಳಿಂದ ಅಲಂಕರಿ ಸಲಿದೆ. ಕಾರ್ಯಕ್ರಮದಲ್ಲಿ ಭಾಗವ ಹಿಸಲು ಎಲ್ಲೆಡೆಗಳಿಂದಾಗಿ ಕಾಂಗ್ರೆಸ್ ಕಾರ್ಯಕರ್ತರು ಆವೇಶಭರಿತರಾಗಿ ಈಗಲೇ ಕಾಸರಗೋಡಿಗೆ ಪ್ರವಹಿ ತೊಡಗಿದ್ದಾರೆ. ಕಾರ್ಯಕ್ರಮದಂಗವಾಗಿ ಕಾಸರಗೋಡಿನಾದ್ಯಂತ ಎಲ್ಲೆಡೆಗಳಲ್ಲಿ ಬಿಗಿ ಪೊಲೀಸ್ ಕಾವಲನ್ನೂ ಏರ್ಪಡಿಸಲಾಗಿದೆ. ಕಾಂಗ್ರೆಸ್ ನೇತಾರರಾದ ರಮೇಶ್ ಚೆನ್ನಿತ್ತಲ,  ಶಶಿ ತರೂರ್, ಕೊಡಿಕುನ್ನಿಲ್ ಸುರೇಶ್, ಯುಡಿಎಫ್ ಸಂಚಾಲಕ ಎಂ.ಎಂ. ಹಸ್ಸನ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಕೆ. ಮುರಳೀಧರನ್ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು.

Leave a Reply

Your email address will not be published. Required fields are marked *

You cannot copy content of this page