ಕಾಂಗ್ರೆಸ್ ನೇತಾರನ ಮೇಲೆ ಹಲ್ಲೆ
ಕಾಸರಗೋಡು: ಪಿಲಿಕ್ಕೋಡ್ ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ಕುಂಞಿಕೃಷ್ಣನ್‌ರ ಮೇಲೆ ಅಕ್ರಮಿಗಳ ತಂಡವೊಂದು ಹಲ್ಲೆ ನಡೆಸಿದೆ. ಗಂಟಲಿಗೆ ಗಾಯಗೊಂಡ ಅವರನ್ನು ಚೆರುವತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಹಲ್ಲೆ ನಡೆಸಿದವರು ಸಿಪಿಎಂ ಕಾರ್ಯಕರ್ತರಾಗಿದ್ದಾರೆಂದು ಕಾಂಗ್ರೆಸ್ ಆರೋಪಿಸಿದೆ. ಪುತ್ತಿಲೋಟ್ ಎಯುಪಿ ಶಾಲೆಯ ೧೨೦ನೇ ನಂಬ್ರದ ಮತಗಟ್ಟೆಗೆ ನಿನ್ನೆ ಆಗಮಿಸಿದ ಕುಂಞಿಕೃಷ್ಣನ್ ಅಲ್ಲಿಂದ ಏಜೆಂಟ್ ಫಾಂ ಪಡೆದು ಹಿಂತಿರುಗಲು ಕಾರಿಗೇರುತ್ತಿದ್ದ ವೇಳೆ ಅಕ್ರಮಿಗಳ ತಂಡವೊಂದು ಅವರ ಮೇಲೆ ಹಲ್ಲೆ ನಡೆಸಿದೆ. ಕುಂಞಿಕೃಷ್ಣನ್‌ರ ಮೇಲೆ ನಡೆದ ಹಲ್ಲೆಯನ್ನು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಖಂಡಿಸಿದ್ದಾರೆ. ಅಕ್ರಮಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.