ಉಪ್ಪಳ: ಉಪ್ಪಳ ಭಗವತೀ ಕ್ಷೇತ್ರ ಬಳಿಯ ನಿವಾಸಿ, ಉಪ್ಪಳ ದಲ್ಲಿ ಕಾರ್ಯಾಚರಿಸುತ್ತಿರುವ ಬಿ.ಆರ್ ಬೇಕರಿ ಮಾಲಕ ದಿ| ರಾಜೀವ. ಬಿ ಅವರ ಪತ್ನಿ ಸರಸ್ವತಿ (87) ಸ್ವ-ಗಹದಲ್ಲಿ ನಿಧನ ಹೊಂ ದಿದರು. ಇವರು ವಿಶ್ವಹಿಂದೂ ಪರಿಷತ್ ಮಾತೃಶಕ್ತಿಯ ಹಿರಿಯ ಕಾರ್ಯಕರ್ತೆಯಾಗಿ, ಸಾಮಾಜಿಕ, ಧಾರ್ಮಿಕ ಕಾರ್ಯಗಳಲ್ಲಿ ಮುಂ ಚೂಣಿಯಲ್ಲಿ ಗುರುತಿಸಿಕೊಂಡಿ ದ್ದರು. ಮೃತರು ಮಕ್ಕಳಾದ ವಿಶು ಕುಮಾರ್, ರಮೇಶ, ಧರ್ಮೇಂದ್ರ, ಗೋಕುಲ್ದಾಸ್, ಸರೋಜಿನಿ, ಹೇಮಲತಾ, ಸುಕನ್ಯ, ಜಯಂತಿ, ಸೊಸೆಯಂದಿರಾದ ಸುನಿತ, ಅಮೃತ, ವೀಣಾ, ಗಿರಿಜ, ಅಳಿ ಯಂದಿರಾದ ಸದಾಶಿವ, ಜಗನ್ನಾಥ ಸಾಲಿಯಾನ್, ಪ್ರದೀಪ್, ಸಹೋದರರಾದ ದಿನಕರ, ಜಯ (ಮುಂಬೈ), ಸಹೋದರಿಯರಾದ ಗೌರಿ, ಗಿರಿಜ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಮನೆಗೆ ಸಂಘ ಪರಿ ವಾರದ ಮುಖಂಡರು, ಕಾರ್ಯಕರ್ತರ ಸಹಿತ ನೂರಾರು ಮಂದಿ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು. ನಿಧನಕ್ಕೆ ವಿಶ್ವಹಿಂದೂ ಪರಿಷತ್ ಮಾತೃಶಕ್ತಿ ಮಂಗಲ್ಪಾಡಿ ಖಂಡ ಸಮಿತಿ ಸಂತಾಪ ಸೂಚಿಸಿದೆ.






