ಕೊಚ್ಚಿ:? ಕಾಡಾನೆ ದಾಳಿಯಿಂದ ರಾಜ್ಯದಲ್ಲಿ ಇನ್ನೊಬ್ಬರು ಸಾವಿಗೀಡಾಗಿದ್ದಾರೆ. ಇಡುಕ್ಕಿ ನೇರ್ಯಮಂಗಲಂ ಕಾಂಞಿರವೇಲಿ ನಿವಾಸಿ ಇಂದಿರ (೭೦) ಎಂಬವರು ಸಾವಿಗೀಡಾದ ದುರ್ದೈವಿಯಾ ಗಿದ್ದಾರೆ. ಮನೆ ಬಳಿಯ ತೋಟಕ್ಕೆ ತಲುಪಿದ ಕಾಡಾನೆ ಇಂದಿರರ ಮೇಲೆ ದಾಳಿ ನಡೆಸಿದೆ. ಇದರಿಂದ ಗಂಭೀರ ಗಾಯಗೊಂಡ ಅವರನ್ನು ಕೋದಮಂಗಲ ತಾಲೂಕು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.