ಕಾಡುಹಂದಿ ಢಿಕ್ಕಿ ಹೊಡೆದು ಬೈಕ್ ಮಗುಚಿ ಸವಾರ ಗಂಭೀರಗಾಯ
ಅಡೂರು: ಕಾಡುಹಂದಿ ಬೈಕ್‌ಗೆ ಢಿಕ್ಕಿ ಹೊಡೆದು ಬೈಕ್ ಮಗುಚಿ ಬಿದ್ದು ಸವಾರ ಗಂಭೀರ ಗಾಯ ಗೊಂಡ ಘಟನೆ ನಡೆದಿದೆ.
ಅಡೂರು ಅಳಿಯನಡ್ಕದ ಎಚ್. ವಿಜಯನ್ (45) ಗಾಯ ಗೊಂಡ ವ್ಯಕ್ತಿ. ಇವರನ್ನು ಮಂಗ ಳೂರಿನ ಖಾಸ ಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ತಲ್ಪಚ್ಚೇರಿಯ ಅಡಿಕೆ ತೋಟ ದಲ್ಲಿ ದುಡಿಯುವ ಕಾರ್ಮಿಕರಿಗೆ ಆಹಾರ ಪೂರೈಸಿ ವಿಜಯನ್ ನಿನ್ನೆ ಬೆಳಿಗ್ಗೆ ಬೈಕ್‌ನಲ್ಲಿ ಹಿಂತಿರುಗುತ್ತಿದ್ದ ದಾರಿ ಮಧ್ಯೆ ಅಡೂರು-ಮಂಡೆಕೋಲ್-ಸುಳ್ಯ ರಸ್ತೆಯ ಮುಂಡಕ್ಕಾಡ್‌ಗೆ ತಲುಪಿದಾಗ ದಾರಿ ಮಧ್ಯೆ ಕಾಡು ಹಂದಿಯೊಂದು ಬಂದು ಬೈಕ್‌ಗೆ ದಿಢೀರ್ ಆಗಿ ಢಿಕ್ಕಿ ಹೊಡೆದಿದೆ. ಆಗ ಬೈಕ್ ಮಗುಚಿ ಬಿದ್ದು ಗಂಭೀರ ಗಾಯಗೊಂಡ ವಿಜಯನ್‌ರನ್ನು ಮೊದಲು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದ ಬಳಿಕ ಮಂಗಳೂರಿಗೆ ಸಾಗಿಸಲಾಯಿತು.