ಕಾಡು ಹಂದಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ: ಚಿರತೆ ದಾಳಿ ಶಂಕೆ
ಮುಳ್ಳೇರಿಯ: ಚಿರತೆ ಕಂಡುಬಂದ ಬಗ್ಗೆ ವರದಿಯಾದ ಹಿನ್ನೆಲೆಯಲ್ಲಿ ಜನರು ಆತಂಕದಿಂದಿರುವಾಗಲೇ ಕಾಡು ಹಂದಿ ಯೊಂದು ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಎರಿಂಞಿಪುಳ ಸಮೀಪ ರಾಘವನ್ ನಾಯರ್‌ರ ತೋಟದಲ್ಲಿ ನಿನ್ನೆ ಹಂದಿಯ ದೇಹ ಪತ್ತೆಯಾಗಿದೆ. ಇದು ಚಿರತೆಯ ದಾಳಿಯಿಂದ ಸಾವಿಗೀಡಾಗಿರಬ ಹುದೆಂದು ಅಂದಾಜಿಸಲಾಗಿದೆ. ಮೊನ್ನೆ ರಾತ್ರಿ ಕೊಟ್ಟಂಗುಳಿಯಲ್ಲಿ ರಾಧಾಕೃಷ್ಣನ್ ಎಂಬವರ ಮನೆಯಂಗಳಕ್ಕೂ ಚಿರತೆ ತಲುಪಿರುವುದಾಗಿ ತಿಳಿಸಲಾಗಿದೆ.