ಕಾಪಾ ಕಾನೂನು ಉಲ್ಲಂಘಿಸಿ ಕ್ವಾರ್ಟರ್ಸ್‌ನಲ್ಲಿ ವಾಸ: ವಿವಿಧ ಪ್ರಕರಣಗಳ ಆರೋಪಿ ಸೆರೆ
ಕಾಸರಗೋಡು: ಕಾಪಾ ಕಾನೂನು ಉಲ್ಲಂಘಿಸಿ ಜಿಲ್ಲೆಗೆ ತಲುಪಿದ ಆರೋಪಿಯನ್ನು ಮತ್ತೆ ಸೆರೆ ಹಿಡಿಯಲಾಗಿದೆ. ನೀಲೇಶ್ವರ ಕರುವಳದ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದ ಪಿ. ವಿಷ್ಣು(26)ನನ್ನು ನೀಲೇಶ್ವರ ಇನ್ಸ್‌ಪೆಕ್ಟರ್ ವಿಪಿನ್ ಜೋಯ್ ಯವರ ನೇತೃತ್ವದಲ್ಲಿ ಸೆರೆ ಹಿಡಿಯಲಾಗಿದೆ. ನಿನ್ನೆ ಮಧ್ಯಾಹ್ನ ಈತನನ್ನು ಸೆರೆ ಹಿಡಿಯಲಾಗಿದ್ದು, ಕಳವು, ಜಗಳ, ಗಾಂಜಾ, ಮಾದಕ ಪದಾರ್ಥ, ಕರ್ತವ್ಯ ನಿರ್ವಹಣೆಗೆ ಅಡ್ಡಿ ಮೊದಲಾದ ಪ್ರಕರಣಗಳಲ್ಲಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿರುವ ಆರೋಪಿಯಾ ಗಿದ್ದಾನೆ ಈತ. ಎಸ್‌ಐ ಮಧು ಸೂದನನ್ ಮಡಿಕೈ, ಸಿವಿಲ್ ಪೊಲೀಸ್ ಆಫೀಸರ್‌ಗಳಾದ ಸುರೇಂದ್ರನ್, ರಾಜೇಶ್, ಹೋಂ ಗಾರ್ಡ್ ಗೋಪಿ, ಚಾಲಕ ಪ್ರದೀಪ್ ಎಂಬಿವರು ಸೆರೆ ಹಿಡಿದ ತಂಡ ದಲ್ಲಿದ್ದರು. ಈತನ ವಿರುದ್ಧ ಇನ್ನೊಂದು ವಾರೆಂಟ್ ಹೊರಡಿಸಲಾಗಿದೆ.