ಕಾರಡ್ಕದಲ್ಲಿ ಉಚಿತ ಆಯುರ್ವೇದ ಶಿಬಿರ
ಮುಳ್ಳೇರಿಯ: ಕಾರಡ್ಕ ಫೌಂಡೇಶನ್ ಟ್ರಸ್ಟ್ನ ಆಶ್ರಯದಲ್ಲಿ ಕಾರಡ್ಕ ಶ್ರೀ ದುರ್ಗಾಕಾಂಪ್ಲೆಕ್ಸ್ನಲ್ಲಿ ನಿನ್ನೆ ಉಚಿತ ಆಯುರ್ವೇದ ವೈದ್ಯಕೀಯ ಶಿಬಿರ ನಡೆಯಿತು. ಪೈವಳಿಕೆ ಅರಮನೆ ರಂಗತ್ರೈ ಅರಸರು ಶಿಬಿರವನ್ನು ಉದ್ಘಾಟಿ ಸಿದರು. ಪೈವಳಿಕೆ ಅರಮನೆ ರಾಧ ಬಲ್ಲಾಳ್, ಕಾರಡ್ಕ ಫೌಂಡೇಶನ್ನ ಅಧ್ಯಕ್ಷ ರಾಘವ ಬಲ್ಲಾಳ್ ಕಾರಡ್ಕ, ಉಣ್ಣಿಕೃಷ್ಣನ್ ಮಾಸ್ತರ್ ಸಹಿತ ಹಲವರು ಭಾಗವಹಿಸಿದರು. ಶಿಬಿರ ದಲ್ಲಿ ಪೆರ್ಲದ ಡಾ| ಕೃಷ್ಣಮೋಹನ್, ಬಾಯಾರಿನ ಡಾ| ಸತ್ಯನಾರಾಯಣ ರೋಗಿಗಳನ್ನು ತಪಾಸಿಸಿ ಚಿಕಿತ್ಸೆ ನಿರ್ದೇಶಿಸಿದರು. ಗೋಪಾಲಕೃಷ್ಣ ಡಿಸ್ಟ್ರಿಬ್ಯೂಟರ್ಸ್ ಕುಂಬಳೆ, ಡಾಬರ್ ಕಂಪೆನಿ ಉಚಿತವಾಗಿ ಔಷಧಿ ವಿತರಿಸಿದರು. ಸುಮಾರು ೧೨೫ಕ್ಕೂ ಅಧಿಕ ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು.