ಕಾರಡ್ಕ ಪಂಚಾಯತ್‌ನಲ್ಲಿ ಪೂರ್ತಿಯಾದ ವಿವಿಧ ಕಾಮಗಾರಿಗಳ ಉದ್ಘಾಟನೆ
ಮುಳ್ಳೇರಿಯ: ಕಾರಡ್ಕ ಪಂಚಾ ಯತ್ ವ್ಯಾಪ್ತಿಯಲ್ಲಿ ಪೂರ್ತಿ ಗೊಂಡ ವಿವಿಧ ಯೋಜನೆಗಳನ್ನು ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸಿದರು. ಶಾಸಕರ ಪ್ರತ್ಯೇಕ ಅಭಿವೃದ್ಧಿ ನಿಧಿ ಬಳಸಿ ಪಂಚಾಯತ್ ವ್ಯಾಪ್ತಿಯ ಆದೂರು ಪಳ್ಳದಲ್ಲಿ ಭೂಜಲ ಇಲಾಖೆ ಮೂಲಕ ಜ್ಯಾರಿಗೊಳಿಸಿದ ಕೊಳವೆ ಬಾವಿ ಆಧಾರಿತ ಕುಡಿಯುವ ನೀರು ಯೋಜನೆಯನ್ನು ಎನ್.ಎ. ನೆಲ್ಲಿಕುನ್ನು ಉದ್ಘಾಟಿಸಿದರು. ಪಂ. ಅಧ್ಯಕ್ಷ ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸಿದರು. ಈ ಯೋಜನೆಯಲ್ಲಿ 12 ಫಲಾನುಭವಿಗಳಿದ್ದಾರೆ. ಯೋಜನೆಗೆ ಅಗತ್ಯವಾದ ಕೊಳವೆ ಬಾವಿಯನ್ನು ಭೂಜಲ ಇಲಾಖೆ ನಿರ್ಮಿಸಿದೆ.
ಯೋಜನೆ ಜ್ಯಾರಿಗೊಳಿಸು ವುದಕ್ಕೆ ಅಗತ್ಯವಾದ ಸ್ಥಳವನ್ನು ಕೆ. ಮುಹಮ್ಮದ್ ಪಟ್ಟಾನ್ ಕೊಡುಗೆಯಾಗಿ ನೀಡಿದ್ದಾರೆ. ಇದೇ ವೇಳೆ ಭೂಜಲ ಇಲಾಖೆಯ ಪ್ಲಾನ್ ಫಂಡ್ ಉಪಯೋಗಿಸಿ ರಾಜ್ಯ ದಾದ್ಯಂತ ಜ್ಯಾರಿಗೊಳಿಸುವ ಕಿರು ನೀರಾವರಿ ಯೋಜನೆಯನ್ನು ಕೂಡಾ ಶಾಸಕರು ಉದ್ಘಾಟಿಸಿದರು. ಶಾಸಕರ ನಿಧಿಯಿಂದ ಪೂರ್ತಿಗೊಳಿಸಿದ ಯೋಜನೆಗಳನ್ನು ಉದ್ಘಾಟಿ ಲಾಯಿತು. 12.50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಪಡ್ಯತ್ತಡ್ಕ ಎರಿಕ್ಕಳ- ಬಸವಮೂಲೆ ರಸ್ತೆಯಲ್ಲಿ 150 ಮೀಟರ್ ರಸ್ತೆಗೆ ಕಾಂಕ್ರೀಟ್ ನಡೆಸಲಾಗಿದೆ. ಕಾರಡ್ಕ ಪಂಚಾ ಯತ್‌ನಲ್ಲಿ ಸಿ.ಎ.ನಗರ ಪುನ್ನಕಂಡಂ ರಸ್ತೆಯನ್ನು 3 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರಿಟೀಕರಣ ನಡೆಸಲಾಗಿದೆ. ಶಾಸಕರ ನಿಧಿ ಉಪಯೋಗಿಸಿ ಈ ಕಾಮಗಾರಿ ನಡೆಸಲಾಗಿದೆ.