ಕಾರಡ್ಕ ಬ್ಲೋಕ್ ಪಂ. ಮಾಜಿ ಸದಸ್ಯೆ ನಿಧನ
ಮುಳ್ಳೇರಿಯ: ಕಾರಡ್ಕ ಬ್ಲೋಕ್ ಪಂಚಾಯತ್ ಮಾಜಿ ಸದಸ್ಯೆ ಕುತ್ತಿಕ್ಕೋಲ್ ಕೊಳತ್ತಿಂಗಾಲ್‌ನ ಕೆ.ಟಿ. ರಾಗಿಣಿ (57) ನಿಧನಹೊಂ ದಿದರು ನಿನ್ನೆ ರಾತ್ರಿ ಜಿಲ್ಲಾ ಆಸ್ಪತ್ರೆಯಲ್ಲಿ ನಿಧನ ಸಂಭವಿಸಿದೆ. ಸಿಪಿಎಂ ಕುತ್ತಿಕ್ಕೋಲ್ ಲೋಕಲ್ ಕಮಿಟಿ ಸದಸ್ಯೆ, ಜನಾಧಿಪತ್ಯ ಮಹಿಳಾ ಅಸೋಸಿಯೇಶನ್ ಕುತ್ತಿಕ್ಕೋಲ್ ಏರಿಯಾ ಸಮಿತಿ ಸದಸ್ಯೆ ಎಂಬೀ ಸ್ಥಾನಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮಹಿಳಾ ಅಸೋಸಿಯೇಶನ್ ಜಿಲ್ಲಾ ಸಮಿತಿ ಸದಸ್ಯೆಯಾಗಿ ಕಾರ್ಯಾಚ ರಿಸಿದ್ದರು. ಮೃತರು ಮಕ್ಕಳಾದ ಅಭಿಲಾಷ್, ಅನೀಶ್, ಸಹೋದರ-ಸಹೋದ ರಿಯರಾದ ಕುಮಾರನ್, ಯಶೋಧ, ಕೆ.ಟಿ. ಮಧು ಸೂದನನ್ (ಸಿಪಿಎಂ ಕುತ್ತಿಕ್ಕೋಲ್ ಬ್ರಾಂಚ್ ಸೆಕ್ರೆಟರಿ), ನಿರ್ಮಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಸಹೋದರ ರಾಜನ್ ಈ ಹಿಂದೆ ನಿಧನಹೊಂದಿದ್ದಾರೆ.