ಕಾರಿನಲ್ಲಿ ಸಾಗಿಸಿದ ೭.೩೧೦ ಗ್ರಾಂ ಎಂಡಿಎಂಎ ಸಹಿತ ಮೂವರು ಸೆರೆ
ಹೊಸದುರ್ಗ: ಕಾರಿನಲ್ಲಿ ಸಾಗಿಸಿದ ೭.೩೧೦ ಗ್ರಾಂ ಎಂಡಿಎಂಎ ಸಹಿತ ಮೂವರು ಯುವಕರನ್ನು ಹೊಸದುರ್ಗ ಪೊಲೀಸರು ಸೆರೆಹಿ ಡಿದರು. ನೀಲೇಶರ ತೈಕಡಪ್ಪುರಂ ಐಸ್ ಪ್ಲಾಂಟ್ ಸಮೀಪ ವಾಸಿಸುವ ಕೆ.ಎಸ್. ಶಾರೋನ್ (೨೮), ಚೆರ್ವತ್ತೂರು ಕೈದಕ್ಕಾಡ್ ಟಿ.ಸಿ. ಸಿರಾಜ್ (೨೮), ಕಳಿಂಞಡಿಯ ಪಿ.ಎಸ್. ಶುರೈಫ್ (೨೮) ಎಂಬಿವರನ್ನು ಹೊಸದುರ್ಗ ಎಸ್‌ಐ ವಿ.ಪಿ. ಅಖಿಲ್ ಬಂಧಿಸಿದ್ದಾರೆ. ನಿನ್ನೆ ಮಧ್ಯಾಹ್ನ ಕಾಞಂಗಾಡ್ ಮೀನಾಫೀ ಸ್ ಬಳಿ ವಾಹನ ತಪಾಸಣೆ ವೇಳೆ ಆಲ್ಟೋ ಕಾರಿನಲ್ಲಿ ಎಂಡಿಎಂಎ ಸಾಗಿಸಿರುವುದು ಪತ್ತೆಯಾಗಿದೆ. ಇವರಿಂದ ಒಂದು ಇಲೆಕ್ಟ್ರಾನಿಕ್ ತಕ್ಕಡಿ, ಒಂದು ಗ್ಲಾಸ್, ಟ್ಯೂಬ್ ವಶಪಡಿಸಲಾಗಿದೆ.