ಕಾರಿನಲ್ಲಿ ಸಾಗಿಸುತ್ತಿದ್ದ 29.4 ಗ್ರಾಂ ಎಂಡಿಎಂಎ ಪತ್ತೆ: ನಾಲ್ವರ ಸೆರೆ
ಉಪ್ಪಳ: ಕಾರಿನಲ್ಲಿ ಸಾಗಿಸುತ್ತಿದ್ದ ಮಾದಕ ವಸ್ತುವಾದ 29.4 ಗ್ರಾಂ ಎಂಡಿಎಂಎ ಸಹಿತ ನಾಲ್ವರನ್ನು ಮಂಜೇಶ್ವರ ಠಾಣೆ ಇನ್ಸ್ಪೆಕ್ಟರ್ ಟೋಲ್ಸನ್ ಪಿ ಜೋಸೆಫ್ ನೇತೃತ್ವದ ತಂಡ ಪತ್ತೆಹಚ್ಚಿ ವಶಪಡಿಸಿಕೊಂಡಿದೆ.
ಇದಕ್ಕೆ ಸಂಬಂಧಿಸಿ ಬಾಯಾರು ಸಮೀಪದ ಬಳ್ಳೂರು ಮರಕ್ಕತ್ತಡ್ಕದ ಮೊಹಮ್ಮದ್ ಅಶ್ರಫ್ (21), ಬೇಕೂರು ಕೋಡಿಬೈಲು ಖತ್ತರ್ ಅಪಾರ್ಟ್ಮೆಂಟ್ ಸಮೀಪದ ನಿಜಾಂ ಮಂಜಿಲ್ನ ಸೈಯದ್ ಮುಹಮ್ಮದ್ ನವಾಸ್ (30), ಬಾಯಾರು ಬಳ್ಳೂರಿನ ಅಹಮ್ಮದ್ ಶಮ್ಮಾಸ್ (20) ಮತ್ತು ಪೆರುವಾಯಿ ಮುಚ್ಚಿರಪದವಿನ ಮೊಹಮ್ಮದ್ ಇಸಾಕ್ (20) ಎಂಬವರನ್ನು ಬಂಧಿಸಲಾಗಿದ.
ಪೈವಳಿಕೆ ಸಮೀಪದ ಬಾಯಿಕಟ್ಟೆ ಯಲ್ಲಿ ನಿನ್ನೆ ಮಧ್ಯಾಹ್ನ ಪೊಲೀಸ್ ಕಾರ್ಯಾಚರಣೆ ನಡೆದಿದೆ. ಮಾಲು ಸಾಗಿಸಲು ಬಳಸಲಾದ ಆಲ್ಟೋ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಚಿಲ್ಲರೆ ಮಾರಾಟ ತಂಡದವರಿಗೆ ನೀಡಲೆಂದು ಆರೋಪಿಗಳು ಕಾರಿನಲ್ಲಿ ಈ ಮಾದಕವಸ್ತು ಸಾಗಿಸುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ.
ಮಾದಕವಸ್ತು ಸಾಗಿಸುತ್ತಿದ್ದ ಬಗ್ಗೆ ಮಂಜೇಶ್ವರ ಪೊಲೀಸ್ ಇನ್ಸ್ಪೆಕ್ಟರ್ಗೆ ಗುಪ್ತ ಮಾಹಿತಿ ಲಭಿಸಿತ್ತು. ಅದರಂತೆ ಮೀಯಪದವಿನಿಂದ ಪೈವಳಿಕೆಗೆ ಬರುತ್ತಿದ್ದ ಆಲ್ಟೋ ಕಾರನ್ನು ಪೊಲೀಸರು ತಡೆದು ನಿಲ್ಲಿಸಿ ತಪಾಸಣೆಗೊಳಪಡಿಸಿ ದಾಗ ಅದರಲ್ಲಿ ಎಂಡಿಎಂಎ ಪತ್ತೆಯಾ ಗಿದೆ. ಕೂಡಲೇ ಆ ಕಾರಿನಲ್ಲಿದ್ದ ಆರೋ ಪಿಗಳನ್ನು ಪೊಲೀಸರು ಮಾಲು ಸಹಿತ ಬಂಧಿಸಿ ಅವರ ವಿರುದ್ಧ ಎನ್ಡಿಪಿಎಸ್ ಕಾನೂನು ಪ್ರಕಾರ ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಈ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡದಲ್ಲಿ ಎಸ್.ಐ ರತೀಶ್ಗೋಪಿ, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಪಿ.ವಿ. ರಾಜೇಶ್ ಕುಮಾರ್, ಸಿವಿಲ್ ಪೊಲೀಸ್ ಆಫೀಸರ್ಗಳಾದ ಪ್ರಶೋಬ್, ಚಾಲಕ ಶುಕ್ಕೂರ್ ಎಂಬವರು ಒಳಗೊಂಡಿದ್ದರು. ಆರೋಪಿಗಳನ್ನು ಇಂದು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದು.
ಕಳೆದ ಶುಕ್ರವಾರ ಉಪ್ಪಳಕ್ಕೆ ಸಮೀಪದ ಪತ್ವಾಡಿಯ ಮನೆ ಯೊಂದರಿಂದ ಪೊಲೀಸರು 3.8 ಕಿಲೋ ಎಂಡಿಎಂಎ, 642 ಗ್ರಾಂ ಗಾಂಜಾ,ಕೊಕೈನ್ ಹಾಗೂ ಮಾದಕ ಮಾತ್ರೆಗಳನ್ನು ಪತ್ತೆಹಚ್ಚಿ ವಶಪಡಿಸಿದ್ದರು. ಅದರ ಬೆನ್ನಲ್ಲೇ ನಿನ್ನೆ ಮತ್ತೆ ಈ ಕಾರ್ಯಾಚರಣೆ ನಡೆದಿದೆ.