ಕಾರಿನಲ್ಲಿ ಸಾಗಿಸುತ್ತಿದ್ದ ೧.೦೩೮ ಕಿಲೋ ಗಾಂಜಾ ವಶ: ಕಾಪಾ ಕೇಸ್ ಆರೋಪಿ ಸಹಿತ ಇಬ್ಬರ ಸೆರೆ

ಕಾಸರಗೋಡು: ಕಾರಿನಲ್ಲಿ ಸಾಗಿಸು ತ್ತಿದ್ದ ೧.೦೩೮ ಕಿಲೋ ಗ್ರಾಂ ಗಾಂಜಾ ವನ್ನು ಕಾಸರಗೋಡು ಎಕ್ಸೈಸ್ ಎನ್ ಫೋರ್ಸ್‌ಮೆಂಟ್ ಆಂಡ್ ಆಂಟಿ ನರ್ಕೋಟಿಕ್ಸ್ ಸ್ಕ್ವಾಡ್‌ನ ಎಕ್ಸೈಸ್ ಸರ್ಕಲ್ ಇನ್ಸ್‌ಪೆಕ್ಟರ್ ಶಂಕರ್ ಜಿ.ಎ.ರ ನೇತೃತ್ವದ ತಂಡ ಪತ್ತೆಹಚ್ಚಿ ವಪಡಿಸಿಕೊಂಡಿದೆ.

ಸೀತಾಂಗೋಳಿಯಲ್ಲಿ ಅಬಕಾರಿ ತಂಡ ನಿನ್ನೆ ವಾಹನ ತಪಾಸಣೆಯಲ್ಲಿ ತೊಡಗಿದ್ದ ವೇಳೆ ಆ ದಾರಿಯಾಗಿ ಬಂದ ಸ್ವಿಫ್ಟ್ ಕಾರನ್ನು ತಡೆದು ನಿಲ್ಲಿಸಿ ಅದನ್ನು ತಪಾಸಣೆಗೊಳಪಡಿಸಿದಾಗ ಅದರಲ್ಲಿ ಗಾಂಜಾ ಪತ್ತೆಯಾಗಿದೆ. ಇದಕ್ಕೆ ಸಂಬಂ ಧಿಸಿ ಸೀತಾಂಗೋಳಿ ನಿವಾಸಿಗಳಾದ ಹನೀಫಾ ಬಿ.(೪೦) ಮತ್ತು ಅಬ್ದುಲ್ ಖಾದರ್ ಅಲಿಯಾಸ್ ಟಯರ್ ಫೈಸಲ್ ಎಂದೂ ಕರೆಯಲಾಗುತ್ತಿರುವ ಫೈಸಲ್ ಇ.ಆರ್. (೩೮) ಎಂಬಿಬ್ಬರನ್ನು ಬಂಧಿಸಿ, ಅವರ ವಿರುದ್ಧ ಎನ್‌ಡಿಪಿಎಸ್ ಪ್ರಕರಣ ದಾಖಲಿಸಲಾಗಿದೆ. ಮಾಲು ಸಹಿತ ಅದನ್ನು ಸಾಗಿಸಲು ಬಳಸಲಾದ ಕಾರನ್ನೂ ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ.

ಬಂಧಿತರ ಪೈಕಿ ಒಂದನೇ ಆರೋಪಿ ಹನೀಫಾ ಈ ಹಿಂದೆ ಎರಡು ಕಿಲೋ ಗಾಂಜಾ ಸಾಗಿಸಿದ ಪ್ರಕರ ಣವೊಂದರಲ್ಲೂ ಆರೋಪಿಯಾಗಿದ್ದಾನೆ. ಎರಡನೇ ಆರೋಪಿ ಫೈಸಲ್‌ನನ್ನು ‘ಕಾಪಾ’ ಕಾನೂನಿನಂತೆ ಇತ್ತೀಚೆಗೆ ಬಂಧಿಸಿ, ಸೆರೆಮನೆ ವಾಸವನ್ನೂ ಅನುಭವಿಸಿದ್ದನೆಂದೂ, ಮಾದಕದ್ರವ್ಯ ಸೇರಿದಂತೆ ಎಂಟರಷ್ಟು ಪ್ರಕರಣಗಳಲ್ಲೂ ಈತ ಆರೋಪಿಯಾಗಿರುವುದಾಗಿ ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ಅಬಕಾರಿ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಪ್ರಿವೆಂಟಿವ್ ಆಫೀಸರ್‌ಗಳಾದ ಮುರಳಿ ಕೆ.ವಿ, ಸಾಜನ್ ಅಪ್ಯಾಲ್, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಪ್ರಜಿತ್ ಕೆ.ಆರ್, ನಾಸರುದ್ದೀನ್ ಎ.ಕೆ, ಶಿಜಿತ್ ವಿ.ವಿ., ಪ್ರಿಷಿ ಪಿ.ಎಸ್, ನಿಖಿಲ್ ಪವಿತ್ರನ್, ಮಹಿಳಾ ಸಿಇಒ ಕೃಷ್ಣಪ್ರಿಯಾ, ಅಬಕಾರಿ ಚಾಲಕರಾದ ಕ್ರಿಸ್ಟಿನ್ ಪಿ.ಎ. ಮತ್ತು ವಿಜಯನ್ ಪಿ.ಎಸ್. ಎಂಬಿವರು ಒಳಗೊಂಡಿದ್ದರು. ಬಂಧಿತ ಆರೋಪಿಗಳನ್ನು ನಂತರ ನ್ಯಾಯಾಲಯದಲ್ಲಿ ಹಾಜರಿಪಡಿಸಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page