ಕಾರಿನ ಇಷ್ಟ ನಂಬ್ರ 4.55 ಲಕ್ಷ ರೂ.ಗೆ ಹರಾಜು
ಕಾಸರಗೋಡು: ವಾಹನದ ಇಷ್ಟ ನಂಬ್ರಕ್ಕಾಗಿರುವ ಹರಾಜಿನಲ್ಲಿ ಸ್ಪರ್ಧೆ ಕಠಿಣವಾದಾಗ ಗರಿಷ್ಠ ಮೊತ್ತ ೪.೫೫ ಲಕ್ಷ ರೂ.ಗೆ ತಲುಪಿತು. ಕೆ.ಎಲ್-60 ಡಬ್ಲ್ಯು 6060 ಎಂಬ ನಂಬ್ರಕ್ಕೆ ಹರಾಜಿನಲ್ಲಿ ಈ ಮೊತ್ತ ಲಭಿಸಿದೆ. ಡಾ. ಅಬೂಬಕರ್ ಕುತ್ತಿಕೋಲ್ ಹಾಗೂ ಸಹೋದರರಾದ ಮುಹಮ್ಮದ್ ಸಮದ್, ಡಾ| ಅಶ್ರಫ್, ಮುಹಮ್ಮದ್ ಶರೀಫ್, ಮುಹಮ್ಮದ್ ಬಶೀರ್ ಎಂಬಿವರು ಸೇರಿ ಈ ಮೊತ್ತಕ್ಕೆ ಬೆನ್ಸ್ ಕಾರಿಗಾಗಿ ಇಷ್ಟದ ನಂಬ್ರವನ್ನು ಸ್ವಂತ ಮಾಡಿದ್ದಾರೆ. ಕಾಞಂಗಾಡ್ ಜೋಯಿಂಟ್ ಆರ್‌ಟಿ ಕಚೇರಿಯಲ್ಲಿ ಆನ್‌ಲೈನ್ ಆಗಿ ಹರಾಜು ನಡೆಸಲಾಗಿತ್ತು. ಈ ನಂಬ್ರಕ್ಕಾಗಿ 50 ಸಾವಿರ ರೂ. ಪಾವತಿಸಿ 8 ಮಂದಿ ಹರಾಜಿನಲ್ಲಿ ಭಾಗವಹಿಸಿದ್ದರು.