ಕಾರು ಗಾಜು ಹೊಡೆದು ಹಾನಿ: ಕೇಸು ದಾಖಲು
ಮುಳ್ಳೇರಿಯ: ನೆಟ್ಟಣಿಗೆ ಕಾಯರ್‌ಪದವಿನ ದೇವಸ್ಯ ಎಂಬವರ ಮನೆ ಹಿತ್ತಿಲಿಗೆ ನಿನ್ನೆ ಅಕ್ರಮವಾಗಿ ನುಗ್ಗಿ ಅಲ್ಲಿ ನಿಲ್ಲಿಸಲಾಗಿದ್ದ ರಂಜನ್ ಎಂಬವರ ಕಾರಿನ ಹಿಂಭಾಗದ ಗಾಜು ಪುಡಿಗೈದು ೧೦೦೦೦ ರೂ. ತನಕ ನಷ್ಟ ಉಂಟುಮಾಡಲಾಗಿದೆ ಎಂದು ದೂರಲಾಗಿದೆ. ಇದರಂತೆ ನಾಲ್ವರ ವಿರುದ್ಧ ಆದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಿಶೋರ್ ಸೇರಿದಂತೆ ನಾಲ್ಕು ಮಂದಿ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ.