ಕಾರು ಢಿಕ್ಕಿಹೊಡೆದು ಬೈಕ್ ಸವಾರನಿಗೆ ಗಂಭೀರ
ಮಾನ್ಯ: ಕಾರು ಹಾಗೂ ಬೈಕ್ ಢಿಕ್ಕಿಹೊಡೆದು ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಕೊಲ್ಲಂಗಾನ ಬಳಿಯ ಕಜಳ ಎಂಬಲ್ಲಿನ ಉದಯ ಕುಮಾರ್ ಭಟ್ರ ಪುತ್ರ ಶ್ರೀರಂಗ (26) ಗಾಯಗೊಂಡಿದ್ದು, ಇವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಸಂಜೆ ಇವರು ತನ್ನ ಬೈಕ್ನಲ್ಲಿ ಮಾನ್ಯಕ್ಕೆ ತೆರಳುತ್ತಿದ್ದಾಗ ಕೊಲ್ಲಂಗಾನ ಸಮೀಪ ಕಾರು ಢಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಇವರನ್ನು ಕಾಸರಗೋಡಿನ ಆಸ್ಪತ್ರೆಗೆ ತಲುಪಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.