ಕಾರು ಢಿಕ್ಕಿ ಹೊಡೆದು ಗಾಯಗೊಂಡು ಚಿಕಿತ್ಸೆಯಲ್ಲಿದ್ದ ವೃದ್ಧ ನಿಧನ
ಕುಂಬಳೆ: ಕಟ್ಟತ್ತಡ್ಕ ವಿಕಾಸ್ ನಗರದಲ್ಲಿ ಕಾರು ಢಿಕ್ಕಿ ಹೊಡೆದು ಗಾಯಗೊಂಡು ಚಿಕಿತ್ಸೆಯಲ್ಲಿದ್ದ ವೃದ್ದ ನಿಧನ ಹೊಂದಿದರು. ಕೊಡ್ಯಮ್ಮೆ ಕಾಜಾರ್ ಮಾಹಿನ್ ಹಾಜಿಯವರ ಪುತ್ರ ಬಡುವನ್ ಕುಂಞಿ (69) ಮೃತ ವ್ಯಕ್ತಿ. ಇತ್ತೀಚೆಗೆ ಕಟ್ಟತ್ತಡ್ಕ ವಿಕಾಸ್ ನಗರದಲ್ಲಿ ಇವರಿಗೆ ಕಾರು ಢಿಕ್ಕಿ ಹೊಡೆದಿದ್ದು, ಗಾಯಗೊಂಡ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಮೃತರು ಮಕ್ಕಳಾದ ಮುಹ ಮ್ಮದ್ ಸಾದಿಕ್, ಫಾತಿಮತ್ ರಿಸಾನಾ, ಅಳಿಯ ಇಸ್ಮಾಯಿಲ್ ಸಲೀಮ್, ಸಹೋದರರಾದ ಅಬ್ದುಲ್ಲ, ಯೂಸಫ್, ಸಹೋ ದರಿಯರಾದ ಬೀಫಾತಿಮ, ನಫೀಸ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.