ಕಾಳಸಂತೆ ತಡೆಯಲು ಮಾರುಕಟ್ಟೆಗಳಲ್ಲಿ ಅಧಿಕಾರಿಗಳಿಂದ ಜಂಟಿ ದಾಳಿ
ಕಾಸರಗೋಡು: ಕಾಳಸಂತೆ, ಕಾಳದಂಧೆಯನ್ನು ತಡೆಯುವುದಕ್ಕಾಗಿ ಎಡಿಎಂ ಕೆ.ವಿ. ಶ್ರುತಿ, ಜಿಲ್ಲಾ ಸಪ್ಲೈ ಆಫೀಸರ್ ಕೆ.ಎನ್. ಬಿಂದು ಎಂಬಿವರ ನೇತೃತ್ವದಲ್ಲಿ ಕಾಸರಗೋಡು ಮಾರುಕಟ್ಟೆಯಲ್ಲಿ ವಿವಿಧ ಇಲಾಖೆಗಳ ಜಂಟಿ ತಪಾಸಣೆ ನಡೆಸಲಾಯಿತು. ನಗರದ ಮಾರುಕಟ್ಟೆ, ಹೋಟೆಲ್, ಚಿಕನ್ ಸ್ಟಾಲ್, ತರಕಾರಿ, ಹಣ್ಣು ಹಂಪಲು ಮಾರಾಟ ಅಂಗಡಿಗಳು, ದಿನಸಿ ಸಾಮಗ್ರಿಗಳ ಅಂಗಡಿಗಳು, ಒಣಮೀನು, ಬೇಕರಿ ಮೊದಲಾದ ೩೮ ಅಂಗಡಿಗಳಲ್ಲಿ ಪರಿಶೀಲನೆ ನಡೆಸಲಾಗಿದೆ. ದರಪಟ್ಟಿಯನ್ನು ಪ್ರದರ್ಶಿಸದ ಅಂಗಡಿಗಳಿಗೆ ನೋಟೀಸ್ ನೀಡಲಾಗಿದೆ. ದರವನ್ನು ಸಂಯೋಜಿಸಿ ಪಟ್ಟಿಯನ್ನು ಪ್ರದರ್ಶಿಸಲು ಅಂಗಡಿ ಮಾಲಕರಿಗೆ ನಿರ್ದೇಶ ನೀಡಲಾಯಿತು. ಹೆಚ್ಚಿನ ದರ ವಸೂಲು ಮಾಡುವ ಅಂಗಡಿ ಗಳ ದರ ಪಟ್ಟಿಯನ್ನು ತಿದ್ದಿ ಏಕರೂಪದ ಪಟ್ಟಿ ಪ್ರದರ್ಶಿಸಲು ಸೂಚಿಸಲಾ ಯಿತು. ಕಾಲಾವಧಿ ಮುಗಿದ ಸಾಮಗ್ರಿ ಗಳನ್ನು ತೆರವುಗೊಳಿಸಲು ನಿರ್ದೇಶಿಸಿ ತಾಕೀತು ನೀಡಲಾಯಿತು. ತಪಾಸಣೆ ತಂಡದಲ್ಲಿ ತಾಲೂಕು ಸಪ್ಲೈ ಅಧಿಕಾರಿಗಳು ಎಂ. ಗಂಗಾಧರನ್, ರೇಶನಿಂಗ್ ಇನ್ಸ್ಪೆಕ್ಟರ್, ಫುಡ್ ಸೇಫ್ಟಿ, ಲೀಗಲ್ ಮೆಟ್ರೋಲಜಿ, ಪೊಲೀಸರು ಭಾಗವಹಿಸಿದರು.