ಕಾಸರಗೋಡಿನಲ್ಲಿ ಫುಡ್ ಸ್ಟ್ರೀಟ್ ಆರಂಭಿಸಲು ತೀರ್ಮಾನ
ಕಾಸರಗೋಡು: ಕಾಸರಗೋಡಿನಲ್ಲಿ ಫುಡ್ ಸ್ಟ್ರೀಟ್ (ಬೀದಿ ಆಹಾರ) ಯೋಜನೆ ಆರಂಭಿಸುವ ತೀರ್ಮಾನ ಹಾಕಿಕೊಳ್ಳಲಾಗಿದೆ. ಕಾಸರಗೋಡು ನಗರಸಭೆ ಮತ್ತು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದೊಂದಿಗೆ ಚರ್ಚೆ ನಡೆಸಿದ ಬಳಿಕ ಈ ವಿಷಯದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗು ವುದು. ಇದರಂತೆ ವಿದ್ಯಾನಗರ ಆಸುಪಾಸಿನಿಂದ ನ್ಯಾಯಾಲಯ ಸಮುಚ್ಚಯದ ತನಕ ರಸ್ತೆ ಬದಿ ಫುಡ್ ಸ್ಟ್ರೀಟ್ ಆರಂಭಿಸುವಯೋಜನೆ ಹಾಕಿಕೊಳ್ಳಲಾಗಿದೆ.