ಕಾಸರಗೋಡು ಅಬಕಾರಿ ರೇಂಜ್‌ನಲ್ಲಿ ಕ್ರಿಸ್ಮಸ್-ನ್ಯೂ ಈಯರ್ ಸ್ಪೆಷಲ್ ಡ್ರೈವ್

ಕಾಸರಗೋಡು: ಅಬಕಾರಿ ರೇಂಜ್ ನಲ್ಲಿ ಕ್ರಿಸ್ ಮಸ್ – ನ್ಯೂ ಇಯರ್ ಸ್ಪೆಷಲ್ ಡ್ರೈವ್ ತೀವ್ರ ಗೆÆಳಿಸಲಾಗಿದೆ. ಕಾಸರ ಗೋಡು ನಗರಸಭೆ, ಚೆಮ್ಮನಾಡು, ಮಧೂರು, ಚೆಂಗಳ ಮತ್ತು ಮೊಗ್ರಾಲ್ ಪುತ್ತೂರು ಪಂಚಾಯಿತಿಗಳ ಕಾಸರಗೋಡು ಈ ರೇಂಜ್‌ನ ಅಧಿಕಾರ ವ್ಯಾಪ್ತಿಯಲ್ಲಿರುವ ಪ್ರದೇಶಗಳಾಗಿವೆ. ರೇಂಜ್ ವ್ಯಾಪ್ತಿಯಲ್ಲಿ ನಕಲಿ ಮದ್ಯ ಉತ್ಪಾದನೆ, ಸ್ಪಿರಿಟ್, ಡ್ರಗ್ಸ್, ಪಾನ್ ಮಸಾಲಾ ಎಂಬಿವುಗಳ ಕಳ್ಳಸಾಗಣೆ, ಮಾರಾಟ ಮುಂತಾದವುಗಳು ಗಮನಕ್ಕೆ ಬಂದಲ್ಲಿ 04994257541, 9496499852 ದೂರವಾಣಿ ಸಂಖ್ಯೆಯಲ್ಲಿ ಅಬಕಾರಿ ಕಚೇರಿಗೆ ಸಂಪರ್ಕಿಸಲು ಅಬಕಾರಿ ಇನ್ಸ್ಪೆಕ್ಟರ್ ತಿಳಿಸಿದ್ದಾರೆ. ರೇಂಜ್ ಆಫೀಸಿನಲ್ಲಿ 2023 ಜನವರಿಯಿಂದ 2023 ಡಿಸೆಂಬರ್ 5ರವರೆಗೆ 176 ಅಬಕಾರಿ ಪ್ರಕರಣಗಳು ಮತ್ತು 13 ಎನ್.ಡಿ.ಪಿ.ಎಸ್ ಪ್ರಕರಣಗಳು ರಿಜಿಸ್ಟರ್ ಮಾಡಲಾಗಿದೆ. 20 ವಾಹನಗಳೂ 1750 ಲೀಟರ್ ಸ್ಪಿರಿಟ್, 1206.41 ಲೀಟರ್ ಇತರೆ ರಾಜ್ಯದ ಮದ್ಯ, 133 ಲೀಟರ್ ಬಿಯರ್, 192.84 ಲೀಟರ್ ಕೇರಳ ಮದ್ಯ, 261 ಲೀಟರ್ ವಾಶ್, 14.361 ಗ್ರಾಂ ಎಂ.ಡಿ.ಎA.ಎ, 543 ಗ್ರಾಂ ಗಾಂಜಾ, 0.9 ಗ್ರಾಂ ಮೆಥಾಂಫೆಟಮೈನ್, 658 ಗ್ರಾಂ ಹಾಶಿಶ್ ಆಯಿಲ್ 191 ಕೋಟ್ಪಾ ಪ್ರಕರಣಗಳಲ್ಲಿ 73.4 ಕೆಜಿ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡು 38,200 ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

Leave a Reply

Your email address will not be published. Required fields are marked *

You cannot copy content of this page