ಕಾಸರಗೋಡು ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಎಮರ್ಜೆನ್ಸಿ ಮೆಡಿಕಲ್ ಕೇರ್ ಸೆಂಟರ್
ಕಾಸರಗೋಡು: ಕಾಸರಗೋಡು ಕೆಎಸ್‌ಆರ್‌ಟಿಸಿ ಬಸ್ಸ್ ಡಿಪೋದಲ್ಲಿ ಎಮರ್ಜೆನ್ಸಿ ಮೆಡಿಕಲ್ ಕೇರ್ ಸೆಂಟರ್ (ತುರ್ತು ವೈದ್ಯಕೀಯ ಶುಶ್ರೂಷೆ ಕೇಂದ್ರ) ಸ್ಥಾಪಿಸಲು ರಾಜ್ಯ ಸಾರಿಗೆ ಇಲಾಖೆ ತೀರ್ಮಾನಿಸಿದೆ.
ಕಾಸರಗೋಡು ಮಾತ್ರವಲ್ಲ, ಕಣ್ಣೂರು ಸೇರಿದಂತೆ ರಾಜ್ಯದ೧೪ ಜಿಲ್ಲೆಗಳ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳಲ್ಲೂ ಇಂತಹ ಕೇಂದ್ರ ಸ್ಥಾಪಿಸಲಾಗುವುದೆಂದು ರಾಜ್ಯ ಸಾರಿಗೆ ಸಚಿವ ಕೆ.ಬಿ. ಗಣೇಶ್ ಕುಮಾರ್ ತಿಳಿಸಿದ್ದಾರೆ. ಇಂತಹ ತುರ್ತು ವೈದ್ಯಕೀಯ ಶುಶ್ರೂಷೆ ಕೇಂದ್ರಗಳು ದೈನಂದಿನ ೨೪ ತಾಸುಗಳ ತನಕವೂ ಕಾರ್ಯವೆಸಗಲಿದೆ. ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣಿಕರಿಗೆ ದಿಢೀರ್ ಆಗಿ ಯಾವುದಾದರೂ ಆರೋಗ್ಯ ಸಮಸ್ಯೆ ಉಂಟಾದಲ್ಲಿ ಇಂತಹ ಶುಶ್ರೂಷೆ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುವುದು.
ಬಳಿಕ ಅಗತ್ಯವಿದ್ದಲ್ಲಿ ಅವರನ್ನು ಅಲ್ಲಿಂದ ಆಸ್ಪತ್ರೆಗೆ ಸಾಗಿ ಸಲಾಗುವು ದೆಂದೂ ಸಚಿವರು ತಿಳಿಸಿ ದ್ದಾರೆ. ಇಂತಹ ತುರ್ತು ವೈದ್ಯಕೀಯ ಶುಶ್ರೂಷೆ ಕೇಂದ್ರಗಳಿಗೆ ಅಗತ್ಯ ವಿರುವ ವೈದ್ಯಕೀಯ ಸಿಬ್ಬಂದಿಗಳನ್ನು ಶೀಘ್ರ ನೇಮಿಸಲಾಗುವುದೆಂದು ಸಚಿವರು ತಿಳಿಸಿದ್ದಾರೆ.