ಕಾಸರಗೋಡು ಜಿಲ್ಲೆಗೆ 40 : 40 ಸಸಿಗಳನ್ನು ನೆಟ್ಟು ಆಚರಣೆ

ಕಾಸರಗೋಡು: ಜಿಲ್ಲೆ ರೂಪೀಕರಣಗೊಂಡು 40 ವರ್ಷ ಪೂರ್ತಿಗೊಂಡ ಇಂದು ಜಿಲ್ಲಾಧಿಕಾರಿ ಕಚೇರಿ ಪರಿಸರದಲ್ಲಿ ಜಿಲ್ಲಾ ಇನ್‌ಫರ್ಮೇಶನ್ ಕಚೇರಿ ಹಾಗೂ ಅರಣ್ಯ ಇಲಾಖೆ, ಜಿಲ್ಲಾಡಳಿತದ ಜಂಟಿ ಆಶ್ರಯದಲ್ಲಿ 40 ಫಲವೃಕ್ಷ ಸಸಿಗಳನ್ನು ನೆಡಲಾಗುವುದು. ಕಲೆಕ್ಟ್ರೇಟ್‌ನ ಮುಂಭಾಗ ಜಿಲ್ಲೆಯ ಸ್ವಂತ ಮರವಾದ ಕಾಸರಕ ಗಿಡವನ್ನು ನೆಟ್ಟು ಜಿಲ್ಲಾಧಿಕಾರಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ಅಪರಾಹ್ನ ೨.೩೦ಕ್ಕೆ ಕಲೆಕ್ಟ್ರೇಟ್ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಹಾಯಕ ಜಿಲ್ಲಾಧಿಕಾರಿ ಸೂಫಿಯಾನ್ ಅಹಮ್ಮದ್ ಅಧ್ಯಕ್ಷತೆ ವಹಿಸುವರು. ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸುವರು. ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

Leave a Reply

Your email address will not be published. Required fields are marked *

You cannot copy content of this page