ಕಾಸರಗೋಡು-ತಿರುವನಂತಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರಲಿದೆ ೧೧ ಹೊಸ ಟೋಲ್ ಕೇಂದ್ರಗಳು: ಟೋಲ್ ಶುಲ್ಕ ೯೧೭ ರೂ.
ಕಾಸರಗೋಡು: ಜಿಲ್ಲೆಯ ತಲಪಾಡಿಯಿಂದ ಆರಂಭಗೊಂಡು ತಿರುವನಂತಪುರದ ಕಾರೋಟ್ ತನಕದ ೬೪೫ ಕಿಲೋ ಮೀಟರ್‌ನಷ್ಟಿರುವ ರಾಷ್ಟ್ರೀಯ ಹೆದ್ದಾರಿ ೬೬ ಅಭಿವೃದ್ಧಿ ಯೋಜನೆ ಪೂರ್ಣಗೊಳ್ಳುವ ವೇಳೆ ವಿವಿಧೆಡೆಗಳಲ್ಲಾಗಿ ಒಟ್ಟು ೧೧ ಹೊಸ ಟೋಲ್ ಕೇಂದ್ರಗಳು ಸ್ಥಾಪಿಸಲ್ಪ ಡಲಿದೆ. ಇದರಂತೆ ಕಾಸರಗೋಡು, ಕಣ್ಣೂರು, ಕಲ್ಲಿಕೋಟೆ, ಮಲಪ್ಪುರಂ, ತೃಶೂರು, ಎರ್ನಾಕುಳಂ ಮತ್ತು ಆಲಪ್ಪುಳ ಜಿಲ್ಲೆಗಳಲ್ಲಿ ತಲಾ ಒಂದರಂ ತೆಯೂ, ಕೊಲ್ಲಂ ಮತ್ತು ತಿರುವನಂ ತಪುರ ಜಿಲ್ಲೆಗಳಲ್ಲಿ ತಲಾ ಎರಡರಂತೆ ಟೋಲ್ ಕೇಂದ್ರಗಳು ಆರಂಭಗೊಳ್ಳಲಿದೆ.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ ನಿರ್ಮಾಣ ಕೆಲಸ ಪೂರ್ಣಗೊಂಡ ಬಳಿಕ ಕಾರಿನಲ್ಲಿ ಕಾಸರಗೋಡಿನಿಂದ ತಿರುವನಂತಪು ರಕ್ಕೆ ಹೋಗುವ ದಾರಿಯ ವಿವಿಧ ಟೋಲ್ ಕೇಂದ್ರಗಳಲ್ಲಾಗಿ ಇನ್ನು ೯೧೭ ರೂ. ಟೋಲ್ ಶುಲ್ಕರೂಪದಲ್ಲಿ ಪಾವತಿಸಬೇಕಾಗಿ ಬರಲಿದೆ. ೨೦೦೮ರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಂಕ ವಸೂಲಿ ಕಾನೂನಿನ ಆಧಾರದಲ್ಲಿ ಟೋಲ್ ಶುಲ್ಕ ನಿಗದಿಪಡಿಸಲಾಗುತ್ತಿದೆ. ಇದರಂತೆ ಕಾರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗುವ ವೇಳೆ ಕಿಲೋ ಮೀಟರ್ ವೊಂದಕ್ಕೆ ತಲಾ ೬೫ ಪೈಸೆಯಂತೆ ಟೋಲ್ ಶುಲ್ಕ ನೀಡಬೇಕಾಗಿದೆ. ಆದರೆ ಮಿನಿ ಬಸ್‌ಗಳು ಕಿಲೋ ಮೀಟರ್‌ವೊಂದಕ್ಕೆ ತಲಾ ೧.೦೫ ರೂ.ನಂತೆಯೂ, ಬಸ್, ಟ್ರಕ್ ಇತ್ಯಾದಿಗಳು ತಲಾ ೨.೨೦ ರೂ. ಹಾಗೂ iಲ್ಟಿ ಅಕ್ಸರ್ ವಾಹನಗಳು ಕಿಲೋಮೀಟರ್ ಒಂದಕ್ಕೆ ತಲಾ ೩.೪೫ ರೂ. ನಂತೆ ಟೋಲ್ ಶುಲ್ಕ ಪಾವತಿಸಬೇಕಾಗಿ ಬರಲಿದೆ. ಆದರೆ ದ್ವಿಚಕ್ರ ವಾಹನ ಮತ್ತು ತ್ರಿಚಕ್ರ ವಾಹನಗಳನ್ನು ಟೋಲ್ ಶುಲ್ಕದಿಂದ ಹೊರತುಪಡಿಸಲಾಗಿದೆ.