ಕಾಸರಗೋಡು ನಗರಸಭೆಗೆ ಐಎಸ್‌ಒ ಅಂಗೀಕಾರ
ಕಾಸರಗೋಡು: ಕಾಸರಗೋಡು ನಗರಸಭೆ ಇನ್ನು ಐಎಸ್‌ಒ ಅಂಗೀಕೃತ ನಗರಸಭೆಯಾಗಿದೆ. ೨೦೨೩-೨೪ನೇ ವಾರ್ಷಿಕ ಯೋಜನೆಯಲ್ಲಿ ಸೇರಿಸಿ ಪೂರ್ತಿಗೊಳಿಸಿದ ಐಎಸ್‌ಒ ೯೦೧/-೨೦೧೫ ಸರ್ಟಿಫಿಕೇಶನ್ ಪ್ರೊಜೆಕ್ಟ್‌ನ ಹಾಗೂ ನಗರಸಭೆಯ ಭೂಮಿಗೆ ಸಂಬಂಧಿಸಿದ ಮಾಹಿತಿಗಳನ್ನು ಪೂರ್ಣವಾಗಿ ಡಿಜಿಟಲೈಸ್ ಮಾಡುವ ಜಿಐಎಸ್ ಮಾಪಿಂಗ್ ಯೋಜನೆಯ ಘೋಷಣೆಯನ್ನು ಶಾಸಕ ಎನ್.ಎ. ನೆಲ್ಲಿಕುನ್ನು ನಿರ್ವಹಿಸಿದರು. ಕಾನ್ಫರೆನ್ಸ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷ ವಿ.ಎಂ. ಮುನೀರ್ ಅಧ್ಯಕ್ಷತೆ ವಹಿಸಿದರು. ಅಬ್ಬಾಸ್ ಬೀಗಂ ಸ್ವಾಗತಿಸಿದರು. ಶಂಸೀರ ಫಿರೋಸ್, ಖಾಲಿದ್ ಪಚ್ಚಕ್ಕಾಡ್, ರೀತ ಆರ್, ಸಿಯಾನ ಹನೀಫ್, ರಜನಿ ಕೆ, ಸವಿತಾ ಟೀಚರ್, ಲಲಿತಾ ಎಂ, ರಂಜಿತ ಎ, ಬೀಫಾತಿಮ್ಮ ಇಬ್ರಾಹಿಂ, ಎ.ಎಂ. ಕಡವತ್, ದಿಲೀಶ್ ಎನ್.ಡಿ, ಸುಗೇಶ್ ಸೋಮನ್, ಪ್ರೀತಿ ಎಂ.ಪಿ ಮಾತನಾಡಿದರು. ಬೆಸ್ಟ್ ಪಿಎಲ್‌ವಿ ಇನ್‌ಪ್ರಿಸನ್, ಪ್ರಶಸ್ತಿಗಳಿಸಿದ ನಗರಸಬಾ ಶುಚಿತ್ವ ಮಿಶನ್ ಆರ್.ಪಿ. ತಾಜುದ್ದೀನ್ ಚೇರಂಗೈಯವರನ್ನು ಈ ವೇಳೆ ಅಭಿನಂದಿಸಲಾಯಿತು. ಲತೀಶ್ ಕೆ.ಸಿ ವಂದಿಸಿದರು.
ನಗರಸಭೆಯಲ್ಲಿ ಸಾರ್ವಜನಿಕ ಸೇನೆಯ ಗುಣಮಟ್ಟಕ್ಕೆ ನೀಡುವ ಅಂತಾರಾಷ್ಟ್ರ ಅಂಗೀಕಾರವಾಗಿದೆ. ಐಎಸ್‌ಒ ಸರ್ಟಿಫಿಕೇಟ್ ದಾಖಲೆ ವ್ಯವಸ್ಥೆ ಸರಿಪಡಿಸುವುದು, ಫ್ರಂಟ್ ಆಫೀಸ್‌ನಲ್ಲಿ ಅಗತ್ಯ ಸೌಕರ್ಯಗಳನ್ನು ಏರ್ಪಡಿಸುವುದು, ಆಫೀಸ್ ಮೆನೇಜ್‌ಮೆಂಟ್ ವ್ಯವಸ್ಥೆ ಸರಿಪಡಿಸುವುದು ಸಹಿತ ವಿವಿಧ ವಿಷಯಗಳ ಆಧಾರದಲ್ಲಿ ಈ ಅಂಗೀಕಾರ ಲಭಿಸಿದೆ.