ಕಾಸರಗೋಡು ನಿವಾಸಿ ಹೈದರಾಬಾದ್ನಲ್ಲಿ ಮೃತ್ಯು
ಕಾಸರಗೋಡು: ಕಾಸರಗೋಡು ನಿವಾಸಿ ಹೈದರಾಬಾದ್ನಲ್ಲಿ ವಾಸ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಕಾಸರಗೋಡು ಬೀಚ್ ರಸ್ತೆಯ ಮಲ್ಯ ನಿವಾಸದ ಪ್ರಭಾಕರ ಮಲ್ಯರ ಪುತ್ರಿ ಎಸ್ಬಿಐ ಹೈದರಾಬಾದ್, ಬೇಗಂ ಪೇಟ ಶಾಖೆಯ ಅಸಿಸ್ಟೆಂಟ್ ಜನರಲ್ ಮೆನೇಜರ್ ಹರೀಶ್ ಪ್ರಭುರವರ ಪತ್ನಿ ರಂಜಿತ ಪಿ. ಮಲ್ಯ (46) ಮೃತಪಟ್ಟವರು. ಮೃತರು ಪತಿ, ಮಕ್ಕಳಾದ ಹರೀಶ್ ಪ್ರಭು, ಅತುಲ್ಯ ಪ್ರಭು, ಸಹೋದರ ನಿಖಿಲ್ ಮಲ್ಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ತಾಯಿ ಇಂದಿರಾ ಮಲ್ಯ (ನಿವೃತ್ತ ಅಧ್ಯಾಪಿಕೆ) ಈ ಹಿಂದೆ ನಿಧನ ಹೊಂದಿದ್ದಾರೆ.