ಕಾಸರಗೋಡು ನ್ಯಾಯಾಲಯದಲ್ಲಿ ಹಾಜರುಪಡಿಸಿ ಜೈಲಿಗೆ ಸಾಗಿಸಿದ ಆರೋಪಿ ಕೈಯಲ್ಲಿ ಗಾಂಜಾ ಪತ್ತೆ

ಕಾಸರಗೋಡು: ಪ್ರಕರಣವೊಂ ದಕ್ಕೆ ಸಂಬಂಧಿಸಿ ಕಾಸರಗೋಡಿನ ನ್ಯಾಯಾಲ ಯದಲ್ಲಿ ಹಾಜರುಪಡಿಸಿ ಬಳಿಕ ಕಣ್ಣೂರು ಸೆಂಟ್ರಲ್ ಜೈಲಿಗೆ ಸಾಗಿಸಲ್ಪಟ್ಟ ಆರೋಪಿಯ ಕೈಯಲ್ಲಿ ೧೦ ಗ್ರಾಂ ಗಾಂಜಾ ಪತ್ತೆಯಾದ ಘಟನೆ ನಡೆದಿದೆ. ಕಾಸರಗೋಡು ಚೌಕಿ ನಿವಾಸಿ ಅಭಿ ಲಾಷ್ ಅಲಿಯಾಸ್ ಹಬೀಬ್ ಎಂಬಾ ತನ ಕೈಯಿಂದ  ಗಾಂಜಾ ಪತತೆಹಚ್ಚ ಲಾಗಿದೆ. ಬೇರೊಂದು ಪ್ರಕರಣಕ್ಕೆ ಸಂಬಂಧಿಸಿ ಅಭಿ ಲಾಷ್ ನನ್ನು ಪೊಲೀಸರು ನಿನ್ನೆ ಕಾಸರಗೋ ಡಿನ  ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದರು. ಬಳಿಕ ಆತನನ್ನು ಕಣ್ಣೂರು ಸೆಂಟ್ರಲ್ ಜೈಲಿಗೆ ಸಾಗಿಸ ಲಾಗಿತ್ತು. ಅಲ್ಲಿ ಜೈಲು ಅಧಿಕಾರಿಗಳು ಆತನ ದೇಹ ತಪಾಸಣೆ ನಡೆಸಿದಾಗ ಆತನ ಕೈಯಲ್ಲಿ ಗಾಂಜಾ ಪತ್ತೆಯಾಗಿ ದೆಯೆಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು ಕಾಸರಗೋ ಡಿಗೆ ತಂದ ವೇಳೆ ಅಲ್ಲಿಂದ ಯಾರೋ ಆತನಿಗೆ ಗಾಂಜಾ ಹಸ್ತಾಂತರಿಸಿರಬ ಹುದೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

RELATED NEWS

You cannot copy contents of this page