ಉಪ್ಪಳ: ಬೇಕೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ಲಸ್ವನ್ ವಿದ್ಯಾರ್ಥಿಗಳ ಮೇಲೆ ರ್ಯಾಗಿಂಗ್ ನಡೆಸಿದ ಆರೋಪದಂತೆ ಪ್ಲಸ್ಟು ವಿದ್ಯಾರ್ಥಿಗಳಾದ 14 ಮಂದಿಯನ್ನು ಅಮಾನತುಗೊಳಿಸಲಾಗಿದೆ. ಈ ತಿಂಗಳ 17ರಂದು ಮಧ್ಯಾಹ್ನ 2 ಗಂಟೆಗೆ ಶಾಲಾ ಆವರಣದೊಳಗೆ ಪ್ಲಸ್ ವನ್ ವಿದ್ಯಾರ್ಥಿಗಳಾದ ಐದು ಮಂದಿ ಮೇಲೆ ಪ್ಲಸ್ಟು ವಿದ್ಯಾರ್ಥಿಗಳಾದ ೧೪ ಮಂದಿ ರ್ಯಾಗಿಂಗ್ ನಡೆಸಿದ್ದಾರೆಂದು ದೂರಲಾಗಿದೆ. ಈ ಬಗ್ಗೆ ಓರ್ವ ವಿದ್ಯಾರ್ಥಿ ನೀಡಿದ ದೂರಿನಂತೆ ಆಂಟಿ ರ್ಯಾಗಿಂಗ್ ಸ್ಕ್ವಾಡ್ ತನಿಖೆ ನಡೆಸಿ ಪ್ರಾಂಶುಪಾಲರಿಗೆ ವರದಿ ನೀಡಿತ್ತು. ಇದರಂತೆ ಪ್ರಾಂಶುಪಾಲರು ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ೧೪ ಮಂದಿ ವಿರುದ್ಧ ಕೇಸು ದಾಖಲಿಸಿಕೊಂಡಿದ್ದು ಅನಂತರ ಮುಂದಿನ ಕ್ರಮದಂಗವಾಗಿ ಕೇಸು ದಾಖಲಿಸಲ್ಪಟ್ಟ ವಿದ್ಯಾರ್ಥಿಗ ಳನ್ನು ಅಮಾನತುಗೊಳಿಸಲು ಶಾಲಾ ಅಧಿಕಾರಿಗಳು ನಿರ್ಧರಿಸಿದ್ದಾರೆ. ರ್ಯಾಗಿಂಗ್ನಿಂದ ಗಾಯಗೊಂಡ ಐವರು ಪ್ಲಸ್ವನ್ ವಿದ್ಯಾರ್ಥಿಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ.






