ಬರಿದಾಗುತ್ತಿರುವ ಹೊಳೆ: ಕೃಷಿಕರು ಆತಂಕದಲ್ಲಿ; ಕುಡಿಯುವ ನೀರಿಗೂ ತತ್ವಾರ ಸಾಧ್ಯತೆ

ಉಪ್ಪಳ: ಮಳೆಗಾಲದಲ್ಲಿ ಹೊಳೆಯಲ್ಲಿ ನೀರು ಉಕ್ಕಿ ಹರಿಯ ಬೇಕಾದ ಈ ವೇಳೆ ಬಿಸಿಲಿನ ತಾಪ ಹೆಚ್ಚಾಗಿ ನೀರಿನ ಮಟ್ಟ ಕುಸಿತಗೊಂಡು ಜನರಲ್ಲಿ ಆತಂಕವನ್ನುAಟು ಮಾಡಿದೆ. ಮಳೆ ತೀರಾ ಕಡಿಮೆಗೊಂಡು ಹೊಳೆ ಸಹಿತ ಕೆರೆ, ಬಾವಿಗಳಲ್ಲಿ ನೀರಿನ ಮಟ್ಟ ಇಳಿಕೆಯಾಗಿದೆ. ನೀರಿನ ಮಟ್ಟ ಇಳಿಕೆಯಾಗಿರುವುದರಿಂದ ಮಂಗಲ್ಪಾಡಿ, ಮಂಜೇಶ್ವರ, ಮೀಂಜ, ವರ್ಕಾಡಿ ಮೊದಲಾದ ಪಂಚಾಯತ್ ವ್ಯಾಪ್ತಿಯ ವಿವಿಧೆಡೆಯ ಕೃಷಿಕರಲ್ಲಿ ಆತಂಕ ಉಂಟು ಮಾಡಿದೆ. ಈಗಾಗಲೇ ಭತ್ತದ ಕೃಷಿ ಮಾಡಿರುವ ಕೃಷಿಕರು ಮಳೆಯಿಲ್ಲದೆ ಇರುವುದರಿಂದ ಗದ್ದೆಗೆ ಕೆರೆಯಿಂದ ನೀರನ್ನು ಬಿಡುವ ಅವಸ್ಥೆ ಉಂಟಾಗಿದೆ. ಅಲ್ಲದೆ ಅಡಿಕೆ, ತೆಂಗು ಕೃಷಿಕರು ಕೂಡ ಸಂಕಷ್ಟಕ್ಕೀಡಾಗಿದ್ದಾರೆ. ಇದೇ ರೀತಿ ಬಿಸಿಲ ತಾಪ ಮುಂದುವರಿದರೆ ಕುಡಿಯುವ ನೀರಿಗೂ ಸಮಸ್ಯೆ ಬರಬಹುದೆಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

RELATED NEWS

You cannot copy contents of this page