ಕಾಸರಗೋಡು: ಅಂಗಡಿ ಆವರಣದಲ್ಲಿ ಸ್ನೇಹಿತನನ್ನು ತಲೆಗೆ ಹೊಡೆದು ಕೊಲೆಗೈದ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯದ ನ್ಯಾಯಾಧೀಶ ರಜಿತ್ ಡಿ.ಎಚ್ ಜೀವಾವಧಿ ಸಜೆ ಹಾಗೂ 5೦ ಸಾವಿರ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ.
ಕರ್ನಾಟಕ ಬಾಗಲಕೋಟೆ ನಿವಾಸಿ ಉಮೇಶ್ ಗೌಡ ನರಸಾಪುರ (4೦) ಎಂಬಾತನಿಗೆ ಈ ಶಿಕ್ಷೆ ವಿಧಿಸ ಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಎರಡು ವರ್ಷ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆಯೆಂದು ತೀರ್ಪಿನಲ್ಲಿ ತಿಳಿಸಲಾಗಿದೆ.
ಕೋಟಿಕುಳಂನಲ್ಲಿ 2021 ಎಪ್ರಿಲ್ ೧೪ರಂದು ಮುಂಜಾನೆ 2 ಗಂಟೆಗೆ ಅಲ್ಲಿನ ಅಂಗಡಿ ಆವರಣದಲ್ಲಿ ನಿದ್ರಿಸುತ್ತಿದ್ದ ಕರ್ನಾಟಕ ಹೀರಾಟಿಯ ದೂಮಪ್ಪ (೫೯) ಎಂಬವರನ್ನು ಪೆಟ್ಟಿಗೆಯಿಂದ ತಲೆಗೆ ಹೊಡೆದು ಕೊಲೆಗೈದ ಪ್ರಕರಣದಲ್ಲಿ ಆರೋಪಿಯಾಗಿರುವ ಉಮೇಶ್ ಗೌಡ ನರಸಾಪುರನಿಗೆ ಈ ಶಿಕ್ಷೆ ವಿಧಿಸಲಾಗಿದೆ.
ಬೇಕಲ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ಅಂದು ಬೇಕಲ ಪೊಲೀಸ್ ಇನ್‌ಸ್ಪೆಕ್ಟರ್ ಆಗಿದ್ದ ಅನಿಲ್ ಬಾಬು ಮೊದಲು ತನಿಖೆ ನಡೆಸಿದ್ದರು. ನಂತರ ಇನ್‌ಸ್ಪೆಕ್ಟರ್ ಪ್ರತೀಶ್ ಟಿ.ವಿ ಈ ಪ್ರಕರಣದ ತನಿಖೆ ಪೂರ್ತೀಕರಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರೋಸಿಕ್ಯೂಶನ್ ಪರ ಹೆಚ್ಚುವರಿ ಸರಕಾರಿ ಫ್ಲೀಡರ್ ಇ. ಲೋಹಿತಾಕ್ಷನ್ ಮತ್ತು ನ್ಯಾಯವಾದಿ ಆದಿರಾ ಬಾಲನ್ ವಾದಿಸಿದ್ದರು.
.






