ಕಾಸರಗೋಡು ಬಿಇಎಂ ಶಾಲೆಯಲ್ಲಿ ಪ್ರವೇಶೋತ್ಸವ
ಕಾಸರಗೋಡು: ನಗರದ ಬಿಇಎಂ ಶಾಲೆಯ ಪ್ರವೇಶೋತ್ಸವ ನಿನ್ನೆ ಜರಗಿದ್ದು ವಿದ್ಯಾರ್ಥಿಗಳು, ಹೆತ್ತವರು, ಪಿಟಿಎ ಸಮಿತಿ, ಶಿಕ್ಷಕ ವೃಂದದವರಿಂದ ನಗರದಲ್ಲಿ ಮೆರವಣಿಗೆ ಜರಗಿತು. ಮೆರವಣಿಗೆಯ ನೇತೃತ್ವವನ್ನು ಕೆ.ಎನ್. ವೆಂಕಟ್ರಮಣ ಹೊಳ್ಳ ವಹಿಸಿದ್ದರು. ಪ್ರಾಂಶುಪಾಲ ರಾಜೇಶ್‌ಚಂದ್ರ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಪಿಟಿಎ ಅಧ್ಯಕ್ಷ ರವಿಶಂಕರ ಅಧ್ಯಕ್ಷತೆ ವಹಿಸಿದರು.
ಶಿಕ್ಷಕಿ ರೋಹಿತಾಕ್ಷಿ, ಶಾರದಾ, ಕೆ.ಎನ್. ವೆಂಕಟ್ರಮಣ ಹೊಳ್ಳ, ಮುಖ್ಯೋಪಾಧ್ಯಾಯ ಗಣೇಶ, ನೌಕರರ ಸಂಘದ ಕಾರ್ಯದರ್ಶಿ ಯಶವಂತ್ ಮಾತನಾಡಿದರು.