ಕಾಸರಗೋಡು ಲೋಕಸಭಾ ಕ್ಷೇತ್ರದ ಮತ ಎಣಿಕೆ ಕೇಂದ್ರೀಯ ವಿ.ವಿಯಲ್ಲಿ

ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರದ ಮತ ಎಣಿಕೆ ಕೇಂದ್ರವನ್ನು ತೀರ್ಮಾನಿಸಲಾಗಿದೆ. ಇದರಂತೆ ಈ ಕ್ಷೇತ್ರದ ಮತ ಎಣಿಕೆ ಪೆರಿಯಾದಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಈ ಬಾರಿ ನಡೆಯಲಿದೆ. ಕೇಂದ್ರೀಯ ವಿ.ವಿ.ಯನ್ನು ಮತ ಎಣಿಕೆ ಕೇಂದ್ರವಾಗಿ ಆರಿಸಿರುವುದು ಇದು ಮೊದಲ ಬಾರಿಯಾಗಿದೆ.

ಈ ಹಿಂದೆ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಮತ ಎಣಿಕೆ ನಡೆಸಲಾಗುತ್ತಿತ್ತು. ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಕಣ್ಣೂರು ಜಿಲ್ಲೆಯ ಕಲ್ಯಾಶ್ಶೇರಿ ಮತ್ತು ಪಯ್ಯನ್ನೂರು ಸೇರಿದಂತೆ ಒಟ್ಟು 7 ವಿಧಾನಸಭಾ ಕ್ಷೇತ್ರಗಳು ಒಳಗೊಂಡಿವೆ. ಈ ಪೈಕಿ ಕಾಸರಗೋಡು ಜಿಲ್ಲೆಯ ಮಂಜೇಶ್ವರ ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ  ಮತಗಟ್ಟೆಗಳಿಗೆ  ಅಗತ್ಯವಿರುವ ಮತದಾನ ಸಾಮಗ್ರಿಗಳ ವಿತರಣಾ ಕೇಂದ್ರವನ್ನಾಗಿ ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯನ್ನಾಗಿ ಈಗ ನಿಗದಿಪಡಿಸಲಾಗಿದೆ.

ಕಾಸರಗೋಡು ವಿಧಾನಸಭೆಗೆ ಅಗತ್ಯವಿರುವ ಚುನಾವಣಾ ಸಾಮಗ್ರಿಗಳನ್ನು ಕಾಸರಗೋಡು ಸರಕಾರಿ ಕಾಲೇಜು, ಉದುಮ ವಿಧಾನಸಭಾ ಕ್ಷೇತ್ರಕ್ಕೆ ಚೆಮ್ನಾಡು ಜಮಾಯತ್ ಹೈಯರ್ ಸೆಕೆಂಡರಿ ಶಾಲೆ, ಹೊಸದುರ್ಗ ಕ್ಷೇತ್ರಕ್ಕೆ ನೆಹರೂ ಆರ್ಟ್ಸ್ ಆಂಡ್ ಸಯನ್ಸ್  ಕಾಲೇಜು ಮತ್ತು ತೃಕರಿಪುರ ವಿಧಾನಸಭೆಯ ಮತಗಟ್ಟೆಗಳಿಗಿರುವ ಚುನಾವಣಾ ಸಾಮಗ್ರಿಗಳನ್ನು ಹೊಸದುರ್ಗ ನಿತ್ಯಾನಂದ ಪೋಲಿಟೆಕ್ನಿಕ್ ಕಾಲೇಜಿಗೆ ತಲುಪಿಸಲಾಗುವುದು.

ಮತದಾನದ ಬಳಿಕ ಮತಗಟ್ಟೆಗಳಿಂದ ಮತದಾನ ಯಂತ್ರಗಳು ಮತ್ತಿತರ ಸಾಮಗ್ರಿಗಳನ್ನು ಆಯಾ ಚುನಾವಣಾ ವಿತರಣಾ ಕೇಂದ್ರಗಳಿಗೆ ಹಿಂತಿರುಗಿಸಲಾಗುವುದು. ಅಲ್ಲಿಂದ ಅವುಗಳನ್ನು ಉಮೇದ್ವಾರರ ಪ್ರತಿನಿಧಿಗಳು ಮತ್ತು ಭದ್ರತಾ ಪಡೆಯ  ಅಧಿಕಾರಿಗಳ ಸಾನಿಧ್ಯದಲ್ಲಿ ಪೆರಿಯ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಸಾಗಿಸಿ ಭದ್ರತಾ ಕೊಠಡಿಗಳಲ್ಲಿ ರಿಸಲಾಗುವುದು. ಮತಎಣಿಕೆ ದಿನದಂದು ಮಾತ್ರವಲ್ಲ ಅವುಗಳನ್ನು ಹೊರ ತೆಗೆಯಲಾಗುವುದು.

Leave a Reply

Your email address will not be published. Required fields are marked *

You cannot copy content of this page