ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಸೇವಾ ಅಗತ್ಯ ಅಂಚೆ ಮತದಾನ ನಾಳೆ ಆರಂಭ
ಕಾಸರಗೋಡು: ಲೋಕಸಭಾ ಕ್ಷೇತ್ರದಲ್ಲಿ ಸೇವಾ ಅಗತ್ಯ ಮತದಾರರಿಗೆ (ಎವಿಇಎಸ್) ಅಂಚೆ ಮತದಾನ ನಾಳೆ ಆರಂಭವಾಗಲಿದೆ. ಈಗಾಗಲೇ ಅರ್ಜಿ ಸಲ್ಲಿಸಿದವರು ವಿಧಾನಸಭೆಯ ಕ್ಷೇತ್ರವಾರುಗಳಾಗಿ ಸ್ಥಾಪಿಸಿರುವ ಅಂಚೆ ಮತ ಕೇಂದ್ರಗಳಲ್ಲಿ ಮತದಾನ ಮಾಡಬಹುದು.
ಚುನಾವಣಾ ಆಯೋಗವು ಅಂಗೀಕರಿಸಿದ ಯಾವುದಾದರೂ ಒಂದು ಗುರುತಿನ ಚೀಟಿಯನ್ನು ಹೊಂದಿರಬೇಕು. ಮತದಾನ ಕೇಂದ್ರವು ಬೆಳಗ್ಗೆ ಒಂಭತ್ತು ಗಂಟೆಯಿAದ ಸಂಜೆ ಐದು ಗಂಟೆಯ ವರೆಗೆ ಕಾರ್ಯನಿ ರ್ವಹಿಸಲಿದೆ ಎಂದು ಜಿಲ್ಲಾಧಿಕಾರಿ ಕೆ. ಇಂಭಶೇಖರ್ ಮಾಹಿತಿ ನೀಡಿದ್ದಾರೆ.
ಮಂಜೇಶ್ವರ ಕ್ಷೇತ್ರದ ಜಿ ಎಚ್ ಎಸ್ ಎಸ್ ಕುಂಬಳೆ, ಕಾಸರಗೋಡು ಕ್ಷೇತ್ರದ ಕಾಸರಗೋಡು ಸರಕಾರಿ ಕಾಲೇಜು, ಉದುಮ ಮಂಡಲದ ಚೆಮ್ನಾಡ್ ಜಮಾಯತ್ ಹೈಯರ್ ಸೆಕೆಂಡರಿ ಶಾಲೆ, ಕಾಞಂಗಾಡ್ ಕ್ಷೇತ್ರದ ದುರ್ಗಾ ಹೈಯರ್ ಸೆಕೆಂಡರಿ ಶಾಲೆ, }್ಣ್ಮಕ್ಕರಿಪುರ ಮಂಡಲದ ಸ್ವಾಮಿ ನಿತ್ಯಾನಂದ ಪಾಲಿಟೆಕ್ನಿಕ್, ಪಯ್ಯನ್ನೂರು ಕ್ಷೇತ್ರದ ಎ. ಕುಂಞರಾಮನ್ ಅಡಿಯೋಡಿ ಸ್ಮಾರಕ ಜಿವಿಎಚ್‌ಎಸ್ ಪಯ್ಯನ್ನೂರು, ಕಲ್ಯಾಶ್ಶೇರಿ ಮಂಡಲದ ಕೆ ಪಿ ಆರ್ ಮೆಮೋರಿಯಲ್ ಎಚ್‌ಎಸ್‌ಎಸ್ ಕಲ್ಯಾಶ್ಶೇರಿ ಎಂಬಿವು ಗಳು ಮತದಾನ ಕೇಂದ್ರಗಳಾಗಿವೆ. ಸತತ ಮೂರು ದಿನಗಳ ಕಾಲ ಈ ಕೇಂದ್ರಗಳು ಕಾರ್ಯನಿರ್ವಹಿಸಲಿವೆ. ಈ ಮೂರು ದಿನಗಳಲ್ಲಿ ಅರ್ಜಿ ಸಲ್ಲಿಸಿದ ಮತದಾರರು ಕೇಂದ್ರಕ್ಕೆ ತೆರಳಿ ಮತ ಚಲಾಯಿಸಬಹುದು.