ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ 273 ಸೂಕ್ಷ್ಮ ಸಂವೇದಿ ಮತಗಟ್ಟೆಗಳು
ಕಾಸರಗೋಡು: ರಾಜ್ಯದಲ್ಲಿ ಲೋಕ ಸಭಾ ಚುನಾವಣೆಗೆ ಇನ್ನೇನು ದಿನಗಳು ಮಾತ್ರ ಬಾಕಿ ಉಳಿದಿರು ವಂತೆಯೇ ಜಿಲ್ಲೆಯಲ್ಲಿ 273 ಮತಗಟ್ಟೆಗಳನ್ನು ಸೂಕ್ಷ್ಮ ಸಂವೇದಿ ಮತಗಟ್ಟೆಗಳಾಗಿ ಗುರುತಿಸಲಾಗಿದೆ.
ಜಿಲ್ಲೆಯಲ್ಲಿ ಒಟ್ಟು 783 ಮತಗಟ್ಟೆ ಗಳಿದ್ದು, ಅದರಲ್ಲಿ 273 ಮತಗಟ್ಟೆಗಳನ್ನು ಸೂಕ್ಷ್ಮ ಸಂವೇದಿ, 42 ಮತಗಟ್ಟೆಗಳನ್ನು ಅತೀವ ಸೂಕ್ಷ್ಮ ಸಂವೇದಿ, 175 ಮತ ಗಟ್ಟೆಗಳನ್ನು ಸಾಧಾರಣ ಸಂವೇದಿ ಹಾಗೂ 2 ಮತಗಟ್ಟೆಗಳನ್ನು ನಕ್ಸಲ್ ಬೆದರಿಕೆ ಮತಗಟ್ಟೆಗಳಾಗಿ ಗುರುತಿಸಲಾಗಿದೆ.
ನಕ್ಸಲ್ ಬೆದರಿಕೆ ಹೊಂದಿರುವ ಮತಗಟ್ಟೆಗಳೆಂದರೆ, ಆದೂರು ಪೊಲೀಸ್ ಠಾಣೆಗೊಳಪಟ್ಟ ಬಳವಂತಡ್ಕ ಅಂಗನ ವಾಡಿ ಬೂತ್ ಮತ್ತು ಪಯರಡ್ಕ ಎಂಜಿ ಎಲ್ಸಿ ಸ್ಕೂಲ್ ಆಗಿ ಗುರುತಿಸ ಲಾಗಿದೆ. ಇಂತಹ ಮತಗಟ್ಟೆಗಳ ಚಲನವಲನಗಳ ಬಗ್ಗೆ ನಿಗಾ ಇರಿಸಲು ವೆಬ್ ಕ್ಯಾಮರಾಗಳನ್ನೂ ಅಳವಡಿಸುವ ಕ್ರಮ ಕೈಗೊಳ್ಳಲಾಗುತ್ತಿದೆ. ಅತೀವ ಸೂಕ್ಷ್ಮ ಸಂವೇದಿ ಮತಗಟ್ಟೆಗಳಲ್ಲಿ ಕೇಂದ್ರ ಪಡೆಗಳನ್ನು ಚುನಾವಣಾ ಕರ್ತವ್ಯಗಳಿ ಗಾಗಿ ನೇಮಿಸಲಾಗುವುದು. ಇದರ ಹೊರತಾಗಿ ಸಶಸ್ತ್ರ ಮೀಸಲು ಪಡೆಯ ಪೊಲೀಸರು ಸೇರಿದಂತೆ ಹೊರ ರಾಜ್ಯಗಳ ಪೊಲೀಸರನ್ನೂ ಚುನಾವಣಾ ಕರ್ತವ್ಯ ಕ್ಕಾಗಿ ಕಾಸರಗೋಡಿಗೆ ಕರೆತರಲಾಗು ವುದು.
ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ 205 ಮತಗಟ್ಟೆಗಳಿದ್ದು, ಇದರಲ್ಲಿ 2 ಮತಗಟ್ಟೆಗಳನ್ನು ಅತೀ ಸೂಕ್ಷ್ಮ ಹಾಗೂ 22 ಮತಗಟ್ಟೆಗಳನ್ನು ಸೂಕ್ಷ್ಮಸಂವೇದಿ ಮತಗಟ್ಟೆಗಳನ್ನಾಗಿ ಗುರುತಿಸಲಾಗಿದೆ. ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 190 ಮತಗಟ್ಟೆಗಳಿದ್ದು, ಅದರಲ್ಲಿ ಮೂರು ಅತೀವ ಸೂಕ್ಷ್ಮ ಸಂವೇದಿ ಮತ್ತು 51 ಸೂಕ್ಷ್ಮ ಸಂವೇದಿ ಮತಗಟ್ಟೆಗಳಾಗಿ ಗುರುತಿಸಲಾಗಿದೆ. ಉದುಮ ಕ್ಷೇತ್ರದಲ್ಲಿ 198 ಮತಗಟ್ಟೆಗಳಿದ್ದು, ಅದರಲ್ಲಿ 8 ಅತೀವಸೂಕ್ಷ್ಮ ಸಂವೇದಿ ಮತ್ತು 65 ಸೂಕ್ಷ್ಮ ಸಂವೇದಿ, ಹೊಸದುರ್ಗ ಕ್ಷೇತ್ರದಲ್ಲಿ 196 ಮತಗಟ್ಟೆಗಳಿದ್ದು, ಅದರಲ್ಲಿ 8 ಅತೀವಸೂಕ್ಷ್ಮ ಸಂವೇದಿ ಮತ್ತು 23 ಸೂಕ್ಷ್ಮ ಸಂವೇದಿ ಹಾಗೂ ತೃಕರಿಪುರ ವಿಧಾ ಸಭಾ ಕ್ಷೇತ್ರದಲ್ಲಿ 194 ಮತಗಟ್ಟೆಗಳಿದ್ದು, ಅದರಲ್ಲಿ 21 ಅತೀವಸೂಕ್ಷ್ಮ ಸಂವೇದಿ ಹಾಗೂ 17ನ್ನು ಸೂಕ್ಷ್ಮ ಸಂವೇದಿ ಮತಗಟ್ಟೆಗಳಾಗಿ ಗುರುತಿಸಲಾಗಿದೆ.