ಕಾಸರಗೋಡು ವಿಧಾನಸಭಾ ಕ್ಷೇತ್ರದ ಬೂತ್ ನಂಬ್ರ 27ರಲ್ಲಿ ಅತ್ಯಂತ ಹೆಚ್ಚು, 201ರಲ್ಲಿ ಅತ್ಯಂತ ಕಡಿಮೆ ಮತದಾರರು

ಕಾಸರಗೋಡು: ಕಾಸರಗೋಡು ಲೋಕಸಭಾ ಮಂಡಲದಲ್ಲಿ ಅತ್ಯಂತ ಹೆಚ್ಚು ಮತದಾರರಿರುವ ಬೂತ್ ಪಯ್ಯನ್ನೂರು ವಿಧಾನಸಭಾ ಕ್ಷೇತ್ರದಲ್ಲಿದೆ. ಇಲ್ಲಿನ 116ನೇ ನಂಬ್ರ ಬೂತ್ನಲ್ಲಿ 1694 ಮತದಾರರಿದ್ದಾರೆ. ರಮಂತಳಿ ಜಿಎಚ್ಎಸ್ಎಸ್ ಮತಗಟ್ಟೆಯಾಗಿದೆ. ಅತ್ಯಂತ ಕನಿಷ್ಟ ಮತದಾರರಿರುವ ಮತಗಟ್ಟೆ ತೃಕರಿಪುರ ವಿಧಾನಸಭಾ ಕ್ಷೇತ್ರದಲ್ಲಿದ್ದು, ವಲಿಯಪರಂಬ ಪಂಚಾಯತ್ನ 152ನೇ ನಂಬ್ರ ಅಂಗನವಾಡಿ ಹಾಲ್ ಈ ಮತಗಟ್ಟೆಯಾಗಿದೆ. ಇಲ್ಲಿ 234 ಮತದಾರರು ಮಾತ್ರವಿದ್ದಾರೆ.
ಮಂಜೇಶ್ವರ ಮಂಡಲದಲ್ಲಿ ಅತ್ಯಂತ ಹೆಚ್ಚು ಮತದಾರರು ಮತಗಟ್ಟೆ ನಂಬ್ರ 40 ಬಾಕ್ರಬೈಲ್ ಎಯುಪಿಎಸ್ ಪಾತೂರಿನಲ್ಲಿದ್ದಾರೆ. ಇಲ್ಲಿ 1440 ಮತದಾರರಿದ್ದಾರೆ. 201ನೇ ನಂಬ್ರದ ಸ್ವಾಮಿ ವಿವೇಕಾನಂದ ಎಯುಪಿ ಶಾಲೆ ಸ್ವರ್ಗದಲ್ಲಿ ಮಂಡಲದ ಅತಿ ಕಡಿಮೆ ಅಂದರೆ 596 ಮತದಾರರಿದ್ದಾರೆ.
ಕಾಸರಗೋಡು ವಿಧಾನಸಭಾ ಕ್ಷೇತ್ರದ ಬೂತ್ ನಂಬ್ರ 27ರ ಅಟಲ್ಜಿ ಕಮ್ಯುನಿಟಿ ಹಾಲ್ನಲ್ಲಿ 140 ಮತದಾರರಿದ್ದಾರೆ. 5ನೇ ನಂಬ್ರ ಬೂತ್ ಉದಯಗಿರಿ ಎಸ್ಎಸ್ಪಿಎಎಲ್ಪಿಎಸ್ನಲ್ಲಿ 432 ಮತದಾರರಿದ್ದಾರೆ. ಉದುಮದಲ್ಲಿ ಹೆಚ್ಚು ಮತದಾರರು 123ನೇ ಅಗಸರಹೊಳೆ ಶಾಲೆ ಮತಗಟ್ಟೆಯಲ್ಲಿದ್ದು (1479), ಅತಿ ಕಡಿಮೆ ಉದುಮ ಸರಕಾರಿ ಶಾಲೆ ಮತಗಟ್ಟೆ ನಂಬ್ರ 92ರಲ್ಲಿ (487) ಮತದಾರರಿದ್ದಾರೆ.
ಇದೇ ರೀತಿ ಕಾಞಂಗಾಡ್ನಲ್ಲಿ ಅತೀ ಹೆಚ್ಚು- 1459 (ಬೂತ್ ನಂಬ್ರ 145), ಅತಿ ಕಡಿಮೆ- 629 (ಬೂತ್ 106), ಕಲ್ಯಾಶ್ಶೇರಿಯಲ್ಲಿ ಅತಿ ಹೆಚ್ಚು 1470 (ಬೂತ್ 141), ಅತಿ ಕಡಿಮೆ 666 (ಬೂತ್ ನಂಬ್ರ 96) ಆಗಿದೆ.

Leave a Reply

Your email address will not be published. Required fields are marked *

You cannot copy content of this page