ಕಾಸರಗೋಡು ಶಿಕ್ಷಣ ಉಪಜಿಲ್ಲಾ ಕಲೋತ್ಸವ: ಚಟ್ಟಂಚಾಲ್ ಎಚ್‌ಎಸ್‌ಎಸ್‌ಗೆ ಸರ್ವಾಂಗೀಣ ಪ್ರಶಸ್ತಿ
ಕಾಸರಗೋಡು: ಚಟ್ಟಂಚಾಲ್ ನಲ್ಲಿ ನಡೆದ ಕಾಸರಗೋಡು ಶಿಕ್ಷಣ ಉಪಜಿಲ್ಲಾ ಶಾಲಾ ಕಲೋತ್ಸವದಲ್ಲಿ ಆತಿಥೇಯ ಚಟ್ಟಂಚಾಲ್ ಹೈಯರ್ ಸೆಕೆಂಡರಿ ಶಾಲೆ ಸರ್ವಾಂಗೀಣ ಪ್ರಶಸ್ತಿ ಗೆದ್ದುಕೊಂಡಿದೆ. ಎಚ್‌ಎಸ್‌ಎಸ್ ವಿಭಾಗಗಳಲ್ಲಿ ಈ ಶಾಲೆ ಕ್ರಮವಾಗಿ 237 ಮತ್ತು 227 ಅಂಕಗಳಿಸಿ ಪ್ರಶಸ್ತಿ ಕಿರೀಟ ಗೆದ್ದುಕೊಂಡಿದೆ.
ಹೈಸ್ಕೂಲ್ ವಿಭಾಗದಲ್ಲಿ ಇರಿಯಣ್ಣಿ ಜಿಎಚ್‌ಎಸ್‌ಎಸ್ 148 ಮತ್ತು ಚೆಮ್ನಾಡು ಜಿಎಚ್‌ಎಸ್‌ಎಸ್ 147 ಅಂಕ ಪಡೆದು ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದಿದೆ. ಹೈಯರ್ ಸೆಕೆಂಡರಿ ವಿಭಾಗದಲ್ಲಿ ಚೆಮ್ನಾಡ್ ಜಮಾಯತ್ ಹೈಯರ್ ಸೆಕೆಂಡರಿ ಶಾಲೆ 225, ಎಡನೀರು ಎಚ್‌ಎಚ್‌ಎಸ್ ಐಬಿಎಚ್‌ಎಸ್‌ಎಸ್ 151 ಅಂಕ ಪಡೆದು ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನಪಡೆದಿದೆ. ಯುಪಿ ವಿಭಾಗದಲ್ಲಿ ಚೆಮ್ನಾಡು ವೆಸ್ಟ್ ಜಿಯುಪಿಎಸ್ ಮತ್ತು ಕಾಸರಗೋಡು ಮೆಡೋನಾ ಎಯುಪಿಎಸ್ ತಲಾ 76 ಅಂಕ ಪಡೆದು ಅಗ್ರ ಸ್ಥಾನ ಪಡೆದಿದೆ. 74 ಅಂಕ ಪಡೆದ ತೆಕ್ಕಿಲ್‌ಪರಂಬ ಸರಕಾರಿ ಜಿಯುಪಿ ಶಾಲೆ ಮತ್ತು 70 ಅಂಕ ಪಡೆದ ಕೋಳಿಯಡ್ಕ ಜಿಯುಪಿಎಸ್ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದಿದೆ. ಎಲ್‌ಪಿ ವಿಭಾಗದಲ್ಲಿ ಕುತ್ತಿಕ್ಕೋಲು ಎಯುಪಿಎಸ್ 63 ಅಂಕ ಪಡೆದು ಪ್ರಥಮ, ಬೋವಿಕ್ಕಾನ ಎಯುಪಿಎಸ್ ಮತ್ತು ಬೆದಿರ ಟಿಟಿಎಂಎಯುಪಿಎಸ್, ಚೇರೂರು ಐಐಎಲ್‌ಪಿಎಸ್, ಕಾಸರಗೋಡು ಮೆಡೋನಾ ಶಾಲೆ 61 ಅಂಕಗಳೊಂದಿಗೆ ದ್ವಿತೀಯ ಮತ್ತು ಕಾಸರಗೋಡು ಚಿನ್ಮಯ ವಿದ್ಯಾಲಯ 60 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದುಕೊಂಡಿದೆ.
ಸಮಾರೋಪ ಸಮಾರಂಭವನ್ನು ಶಾಸಕ ಸಿ.ಎಚ್. ಕುಂಞಂಬು ಉದ್ಘಾಟಿಸಿ ಬಹುಮಾನ ವಿತರಿಸಿದರು. ಚೆಮ್ನಾಡ್ ಪಂಚಾಯತ್ ಉಪಾಧ್ಯಕ್ಷ ಮಸ್ಸೂರಿ ಕುರಿಕ್ಕಳ್ ಅಧ್ಯಕ್ಷತೆ ವಹಿಸಿದರು. ನಟ ಉಣ್ಣಿರಾಜ ಚೆರ್ವತ್ತೂರು, ಎಇಒ ಸೆಬಾಸ್ಟಿನ್ ಬರ್ನಾಡ್ ಮೊಂತೇರೊ ಸೇರಿದಂತೆ ಹಲವರು ಭಾಗವಹಿಸಿ ಮಾತನಾಡಿದರು.