ಕಾಸರಗೋಡು ಶ್ರೀ ವೆಂಕಟ್ರಮಣ ಬಾಲಗೋಕುಲ ಕುಟುಂಬ ಸಂಗಮ
ಕಾಸರಗೋಡು: ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನದಲ್ಲಿ ಶ್ರೀ ವೆಂಕಟ್ರಮಣ ಬಾಲಗೋಕುಲದ “ಕುಟುಂಬ ಸಂಗಮ” ನಡೆಯಿತು. ಬಾಲಗೋಕುಲ ಪ್ರಮುಖ್ ದೇವದಾಸ್ ನುಳ್ಳಿಪ್ಪಾಡಿ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದರು. ಬಾಲಗೋಕುಲದ ಮಕ್ಕಳಿಂದ “ಮಾತೃ ಪೂಜನಾ” ದೇವದಾಸ್ ನುಳ್ಳಿಪ್ಪಾಡಿ ಇವರ ನೇತೃತ್ವದಲ್ಲಿ ನಡೆಯಿತು. ಮಕ್ಕಳಿಗೆ ಮತ್ತು ಹಿರಿಯರಿಗೆ “ರಾಮಾಯಣ ಮತ್ತು ಮಹಾಭಾರತದ” ರಸಪ್ರಶೆ್ನ ಸ್ಪರ್ಧೆ ಹಾಗೂ ವಿವಿಧ ಆಟೋಟ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು. ರಮ್ಯಾ, ಆಶಿಕಾ, ಅಥಿತಿ ಪ್ರಾರ್ಥನೆ ಹಾಡಿದರು. ಯಕ್ಷಗಾನ ಅರ್ಥಧಾರಿ ನಾಯ್ಕಾಪು ಗುರುಮೂರ್ತಿ, ಸಂಗೀತ ವಿದ್ವಾನ್ ಕಲ್ಮಾಡಿ ಸದಾಶಿವ ಆಚಾರ್ಯ ಅತಿಥಿಗಳಾಗಿ ಭಾಗವಹಿಸಿದರು. ಬಾಲಗೋಕುಲದ ಅಧ್ಯಾಪಿಕೆ ಶ್ರೀಲತಾ ಟೀಚರ್ ಉಪಸ್ಥಿತರಿದ್ದರು. ಬಾಲಗೋಕುಲದ ಮಕ್ಕಳಿಗೆ ”ಪುಸ್ತಕ ವಿತರಣೆ” ಮತ್ತು ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಎಸ್ .ಎಸ್. ಎಲ್.ಸಿ ಮತ್ತು ಪ್ಲಸ್-ಟು ನಲ್ಲಿ ಅಧಿಕ ಅಂಕ ಗಳಿಸಿದ ಶ್ರೀ ವೆಂಕಟ್ರಮಣ ಬಾಲಗೋಕುಲದ ಹಳೆ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮಕ್ಕಳಿಂದ ನೃತ್ಯ ವೈವಿಧ್ಯ ನಡೆಯಿತು. ವಿವಿಧ ಗಣ್ಯರು ಉಪಸ್ಥಿತರಿದ್ದರು. ಸಾಮಾಜಿಕ ಕಾರ್ಯಕರ್ತ ರಾಮಕೃಷ್ಣ ಹೊಳ್ಳ ಸ್ವಾಗತಿಸಿ, ಕಿಶೋರ್ ಕುಮಾರ್ ವಂದಿಸಿದರು.