ಕಾಸರಗೋಡು ಸಂಪೂರ್ಣ ಡಿಜಿಟಲ್ ಜಿಲ್ಲೆ ಘೋಷಣೆ ನಾಳೆ
ಕಾಸರಗೋಡು: ಕಾಸರಗೋಡು ಸಂಪೂರ್ಣ ಡಿಜಿಟಲ್ ಸಾಕ್ಷರತಾ ಜಿಲ್ಲೆಯಾಗಿ ನಾಳೆ ಬೆಳಿಗ್ಗೆ ಕಾಸರಗೋಡು ನಗರಸಭಾ ಪುರಭವನದಲ್ಲಿ ನಡೆಯುವ ಜಿಲ್ಲಾ ಮಟ್ಟದ ಪಟ್ಟಾ ಮೇಳದಲ್ಲಿ ಕಂದಾಯ ಸಚಿವ ಕೆ. ರಾಜನ್ ಘೋಷಿಸುವರು. ಶಾಸಕ ಎನ್.ಎ. ನೆಲ್ಲಿಕುನ್ನು ಅಧ್ಯಕ್ಷತೆ ವಹಿಸುವರು. ಸಂಸದ ರಾಜ್ಮೋಹನ್ ಉಣ್ಣಿತ್ತಾನ್, ಶಾಸಕರು ಪಂಚಾಯತ್, ನಗರಸಭಾ ಪ್ರತಿನಿಧಿಗಳು, ಜಿಲ್ಲಾಧಿಕಾರಿ ಕೆ. ಇಂಭಶೇಖರ್ ಭಾಗವಹಿಸುವರು. ಸಾಕ್ಷರತಾ ಮಿಷನ್ ಡೈರೆಕ್ಟರ್ ಪ್ರೊ. ಎ.ಜಿ. ಒಲಿನ, ಕೈಟ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಕೆ. ಅನ್ವರ್ ಸಾದತ್ ಪ್ರಧಾನ ಭಾಷಣ ಮಾಡುವರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶಾನವಾಸ್ ಪಾದೂರು, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ. ಶಕುಂತಳ, ಗೀತಾಕೃಷ್ಣನ್, ಎಂ. ಮನು, ಸದಸ್ಯರಾದ ಸಜಿತ್, ಜಾಸ್ಮಿನ್ ಕಬೀರ್, ಕೆ. ಕಮಲಾಕ್ಷಿ, ಶೈಲಜಾ ಭಟ್, ಗೋಲ್ಡನ್ ಅಬ್ದುಲ್ ರಹ್ಮಾನ್, ಫಾತಿಮತ್ ಶಮ್ನಾ, ಜಮೀಲಾ ಸಿದ್ದಿಕ್, ನಾರಾಯಣ ನಾಯ್ಕ್, ಮಾಧವನ್ ಮಣಿಯರ ಸಹಿತ ಹಲವರು ಭಾಗವಹಿಸುವರು. 16ರಿಂದ 60 ವರ್ಷ ಮಧ್ಯೆಗಿನ ಪ್ರಾಯದ 1ಲಕ್ಷದ 12 ಸಾವಿರ ಮಂದಿ ಜಿಲ್ಲೆಯಲ್ಲಿ ಡಿಜಿಟಲ್ ಸಾಕ್ಷರರಾಗಿದ್ದಾರೆ. 750 ಅಧ್ಯಾಪಕರು ಭಾಗವಹಿಸಿದ್ದರು.