ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸಂಘ ಉದ್ಘಾಟನೆ: ವೃತ್ತಿ ಬದುಕಿನ ಕ್ಷಣಗಳನ್ನು ಮೆಲುಕುಹಾಕಿದ ಹಳೆ ವಿದ್ಯಾರ್ಥಿ ಗಣೇಶ್ ಕಾಸರಗೋಡು
ಕಾಸರಗೋಡು: ಕಾಸರಗೋಡು ಸರಕಾರಿ ಕಾಲೇಜು 2024-25 ನೇ ಶೈಕ್ಷಣಿಕ ವರ್ಷದ ಕನ್ನಡ ಸಂಘದ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ಕಾಲೇಜಿನ ಸೆಮಿನಾರ್ ಸಭಾಂಗಣದಲ್ಲಿ ಜರಗಿತು. ಪ್ರಾಂಶುಪಾಲ ಡಾ. ವಿ.ಎಸ್. ಅನಿಲ್ ಕುಮಾರ್ ಅಧ್ಯಕ್ಷತೆ ವಹಿಸಿದರು. ಇದೇ ವೇಳೆ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕೋರುವ ಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸಿನಿಮಾರಂಗದ ಖ್ಯಾತ ಪತ್ರಕರ್ತ ಗಣೇಶ್ ಕಾಸರಗೋಡು ಹಾಗೂ ಕನ್ನಡ ಚಲನಚಿತ್ರ ನಿರ್ದೇಶಕ ಗಿರಿಕೃಷ್ಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಕನ್ನಡ ವಿಭಾಗ ಮುಖ್ಯಸ್ಥೆ ಸುಜಾತಾ ಎಸ್. ನೇತೃತ್ವ ನೀಡಿದರು. ಕಾರ್ಯಕ್ರಮದಲ್ಲಿ ಗಣೇಶ್ ಕಾಸರಗೋಡು ಬರೆದ ಮೌನ ಮಾತಾದಾಗ, ಚದುರಿದ ಚಿತ್ರಗಳು, ಮಾಸಿದ ಬದುಕು ಮೊದಲಾದ ಪುಸ್ತಕಗಳನ್ನು ಕನ್ನಡ ವಿಭಾಗದ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದರು. ಕನ್ನಡ ವಿಭಾಗದ ನೂತನ ಕಾರ್ಯದರ್ಶಿ ಕಿಶೋರ್ ಕುಮಾರ್ ಅತಿಥಿಗಳನ್ನು ಗೌರವಿಸಿದರು. ಜಸ್ನಾ ಶುಭ ಹಾರೈಸಿದರು. ಅನಿರುದ್ಧ್ ಸ್ವಾಗತಿಸಿ, ದೀಪ್ತಿ ಎಂ. ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ವಿಭಾಗ ಅಧ್ಯಾಪಕರಾದ ಡಾ. ಬಾಲಕೃಷ್ಣ ಹೊಸಂಗಡಿ, ಡಾ. ಶ್ರೀಧರ ಎನ್, ಡಾ. ಸವಿತಾ ಬಿ, ಡಾ. ವೇದಾವತಿ ಎಸ್, ಡಾ. ಆಶಾಲತಾ ಸಿ.ಕೆ, ಲಕ್ಷ್ಮಿ, ಗಣೇಶ್ ಕಾಸರಗೋಡು ಅವರ ಪತ್ನಿ ಗಾಯತ್ರಿ ಗಣೇಶ್ ಉಪಸ್ಥಿತರಿದ್ದರು.