ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಎಸ್‌ಎಫ್‌ಐ-ಎಂಎಸ್‌ಎಫ್ ಘರ್ಷಣೆ: ಮೂವರಿಗೆ ಗಾಯ
ಕಾಸರಗೋಡು: ಕಾಸರ ಗೋಡು ಸರಕಾರಿ ಕಾಲೇಜಿನಲ್ಲಿ ನಿನ್ನೆ ಎಸ್‌ಎಫ್‌ಐ ಮತ್ತು ಎಂಎಸ್‌ಎಫ್ ಗೆ ಸೇರಿದ ವಿದ್ಯಾರ್ಥಿ ಗಳ ಮಧ್ಯೆ ಘರ್ಷಣೆ ಉಂಟಾಗಿ ಎಸ್‌ಎಫ್‌ಐಯ ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಈ ಕಾಲೇಜಿನ ವಿದ್ಯಾರ್ಥಿ ಗಳು ಹಾಗೂ ಎಸ್‌ಎಫ್‌ಐ ಕಾರ್ಯಕರ್ತರಾದ ಕಲ್ಲಿಕೋಟೆ ಕೂಡಿಯಾತ್ತೂರು ಕುಳಂಗರೆ ನಿವಾಸಿ ಅನ್ಸಲ್ ಮುಹಮ್ಮದ್ ಅಲಿ (20), ವೈಶಾಕ್ (20) ಮತ್ತು ವಿಷ್ಣು ಮೋಹನನ್ (20) ಎಂಬವರು ಗಾಯಗೊಂಡಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಈ ಬಗ್ಗೆ ಗಾಯಾಳುಗಳು ನೀಡಿದ ದೂರಿನಂತೆ ಎಂಎಸ್‌ಎಫ್ ಕಾರ್ಯಕರ್ತರಾದ ಗಸ್ವಾನ್, ಫರ್ಹಾನ್, ಶಬೀರ್, ಸಿನಾನ್, ಶಾಹಿಲ್, ಬಿ ಶರತ್, ಅಜ್ಮಲ್ ಮತ್ತು ರೈಹಾನ್ ಎಂಬವರ ವಿರುದ್ಧ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾಲೇಜಿನ ಟಾಲೆಟ್‌ನ್ನು ಮುಚ್ಚಿದುದನ್ನು ಪ್ರಶ್ನಿಸಿದ ದ್ವೇಷದಿಂದ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಗಾಯಾಳುಗಳು ಆರೋಪಿಸಿದ್ದಾರೆ.