ಕಾಸರಗೋಡು ಸೇರಿದಂತೆ ರಾಜ್ಯದ ೩೦ ರೈಲು ನಿಲ್ದಾಣಗಳು ಅಮೃತ್ ಭಾರತ್ ಯೋಜನೆಯಲ್ಲಿ ಸೇರ್ಪಡೆ
ಕಾಸರಗೋಡು: ಕಾಸರಗೋಡು ರೈಲು ನಿಲ್ದಾಣ ಸೇರಿದಂತೆ ರಾಜ್ಯದ ೩೦ ರೈಲು ನಿಲ್ದಾಣಗಳನ್ನು ಕೇಂದ್ರ ಸರ ಕಾರದ ಹೊಸ ಅಮೃತ್ ಭಾರತ್ ಯೋ ಜನೆಯಲ್ಲಿ ಸೇರ್ಪೆಡಗೊಳಿಸಲಾಗಿದೆ.
ರಾಜ್ಯದ ರೈಲು ನಿಲ್ದಾಣಗಳನ್ನು ಎgಡು ವಲಯಗಳಾಗಿ ವಿಂಗಡಿಸಿ ಈ ಯೋಜನೆ ಜ್ಯಾರಿಗೊಳಿಸಲಾಗು ವುದು. ಕಾಸರಗೋಡಿನ ಹೊರತಾಗಿ ರಾಜ್ಯದ ಇತರ ಜಿಲ್ಲೆಗಳ ಆಯ್ದ ರೈಲು ನಿಲ್ದಾಣಗಳನ್ನು ಈ ಯೋಜನೆಯಲ್ಲಿ ಸೇರ್ಪಡೆಗೊಳಿಸಲಾಗಿದೆ. ಇದರಂತೆ ಪ್ರತೀ ರೈಲು ನಿಲ್ದಾಣಕ್ಕೆ ತಲಾ ೧೫ ಕೋಟಿ ರೂ.ನಂತೆ ವ್ಯಯಿಸಿ ಅವುಗಳನ್ನು ಅಮೃತ್ ಭಾರತ್ ಮೇಲ್ದ ರ್ಜೆಗೇರಿಸಲಾಗುವುದು. ಈ ಯೋಜನೆ ಯಂತೆ ಕೇರಳದಲ್ಲಿ ಮಾತ್ರವಾಗಿ ರೈಲ್ವೇ ಇಲಾಖೆ ೧೦೦ ಕೋಟಿ ರೂ.ಗಿಂತಲೂ ಹೆಚ್ಚು ಹಣ ರೈಲ್ವೇ ಇಲಾಖೆ ವ್ಯಯಿಸ ಲಿದೆ. ಈ ಎಪ್ರಿಲ್ ತಿಂಗಳಳಗಾಗಿ ಲೋಕಸಭಾ ಚುನಾವಣೆ ನಡೆಯಲಿದ್ದು, ಆದ್ದರಿಂದ ಪ್ರಸ್ತುತ ಯೋಜನೆ ಕೇಂದ್ರ ಸರಕಾರಕ್ಕೆ ಅನುಕೂಲಕರವಾಗಿ ಪರಿಣಮಿಸಲಿದೆಯೆಂಬ ಲೆಕ್ಕಾಚಾರ ವನ್ನು ಹಾಕಿಕೊಳ್ಳಲಾಗಿದೆ.
ಕೇರಳ ಸೇರಿದಂತೆ ದೇಶದಲ್ಲಿ ಒಟ್ಟಾರೆಯಾಗಿ ೩೨ ರಾಜ್ಯಗಳ ೧೩೦೯ ರೈಲು ನಿಲ್ದಾಣಗಳನ್ನು ಅಮೃತ್ ಭಾರತ್ ಯೋಜನೆಯಲ್ಲಿ ಕೇಂದ್ರ ರೈಲ್ವೇ ಇಲಾಖೆ ಒಳಪಡಿಸಿದೆ. ಈ ಪೈಕಿ ೫೦೯ ರೈಲು ನಿಲ್ದಾಣಗಳ ನವೀಕರಣ ಕಾಮಗಾರಿ ಶೀಘ್ರ ಆರಂಭಗೊಳ್ಳಲಿದೆ. ೨೦೨೪ ಮಾರ್ಚ್ ನೊಳಗಾಗಿ ಈ ಯೋಜನೆ ಪೂರ್ಣಗೊಳಿಸಲು ತೀರ್ಮಾನಿಸಲಾಗಿದೆ. ಕಡಿಮೆ ವೆಚ್ಚದಲ್ಲಿ ರೈಲು ನಿಲ್ದಾಣಗಳನ್ನು ನವೀಕರಿಸುವುದು ಅಮೃತ್ ಭಾರತ್ ಯೋಜನೆಯ ಪ್ರಧಾನ ಗುರಿಯಾಗಿದೆ. ಇದರಂತೆ ರೈಲು ನಿಲ್ದಾಣಗಳ ಹಳೆ ಕಟ್ಟಡಗಳನ್ನು ಕೆಡಹಿ ಹೊಸ ಕಟ್ಟಡಗಳನ್ನು ನಿರ್ಮಿಸಲಾಗು ವುದು. ಇದರ ಹೊರತಾಗಿ ಎಕ್ಸ ಲೇಟರ್, ಪ್ರಯಾಣಿಕರಿಗೆ ನಡೆದುಕೊಂಡು ಹೋಗಲು ಮೇಲ್ಸೇತುವೆ, ಲಿಫ್ಟ್, ಪಾರ್ಕಿಂಗ್, ಫ್ಲಾಟ್‌ಫಾಂ, ವಿಶ್ರಾಂತಿ ಕೊಠಡಿ ಇತ್ಯಾದಿಗಳನ್ನು ಈ ಯೋಜನೆ ಯಂತೆ ಏರ್ಪಡಿಸಲಾಗುವುದು.
ರೈಲು ಪ್ರಯಾಣಿಕರ ವಿಶ್ರಾಂತಿ ಕೊಠಡಿಗಳನ್ನು ನವೀಕರಿಸ ಲಾಗುವುದಲ್ಲದೆ ಸಿಸಿ ಟಿವಿ ಕ್ಯಾಮರಾಗಳು, ವೈ-ಫೈಫ್ ಸೌಕರ್ಯಗಳನ್ನು ಇನ್ನಷ್ಟು ಮೇಲ್ದರ್ಜೆಗೇರಿಸಲಾಗುವುದು.