ಕಿನ್ನಿಂಗಾರ್‌ನ ಕ್ಷೌರಿಕ ಪುತ್ತೂರು ಬಳಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ
ಮುಳ್ಳೇರಿಯ: ಕಿನ್ನಿಂಗಾರ್‌ನಲ್ಲಿ ಬಾರ್ಬರ್ ಶಾಪ್ ನಡೆಸುತ್ತಿದ್ದ ಯುವಕ ಪುತ್ತೂರಿನಲ್ಲಿ ನೇಣು ಬಿಗಿದು ಸಾವಿಗೀ ಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಪುತ್ತೂರು ಅರಿಯಡ್ಕ ನಿವಾಸಿ ಯೋಗೀಶ್ ಭಂಡಾರಿ (42) ಮೃತಪಟ್ಟ ವ್ಯಕ್ತಿ. ಪುತ್ತೂರು ತಲೇಂಜಿ ಸಮೀಪ ನೇಣು ಬಿಗಿದ ಸ್ಥಿತಿಯಲ್ಲಿ ಇವರು ಪತ್ತೆಯಾಗಿದ್ದರು. ಮೊನ್ನೆ ಬೆಳಿಗ್ಗೆ ಸೊಸೈಟಿಗೆ ಹಾಲು ಕೊಂಡೊ ಯ್ಯುತ್ತಿದ್ದವರಿಗೆ ಸಮೀಪದ ಹಿತ್ತಿಲಿನಿಂದ ಮೊಬೈಲ್ ರಿಂಗಣಿಸುತ್ತಿರುವುದು ಕೇಳಿ ಬಂದಿದೆ. ಇದರಿಂದ ಅತ್ತ ನೋಡಿದಾಗ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಕಂಡು ಬಂದಿದೆ. ಕಿನ್ನಿಂಗಾರ್‌ನ ಬಾಡಿಗೆ ಮನೆಯಲ್ಲಿ ಪತ್ನಿ, ಮಕ್ಕಳೊಂದಿಗೆ ಯೋಗೀಶ್ ವಾಸಿಸುತ್ತಿದ್ದರು. ಶುಕ್ರವಾರ ಸಂಜೆ ಪಾಪೆಮಜಲ್ ಎಂಬಲ್ಲಿರುವ ತರವಾಡು ಮನೆಗೆ ತೆರಳಿದರು. ಬಳಿಕ ಅಲ್ಲಿಂದ ಕಿನ್ನಿಂಗಾರ್‌ಗೆ ಹೋಗುವುದಾಗಿ ತಿಳಿಸಿ ಅಲ್ಲಿಂದ ಹೊರಟಿದ್ದರೆನ್ನಲಾಗಿದೆ. ಆದರೆ ಕಿನ್ನಿಂಗಾರ್‌ಗೆ ತಲುಪದ ಅವರು ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಮೃತರು ತಾಯಿ ಯಮುನ, ಪತ್ನಿ ನಳಿನಿ, ಮಕ್ಕಳಾದ ಸಹನ, ಸಂಜನ ಹಾಗೂ ಸಹೋದರರ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಘಟನೆ ಬಗ್ಗೆ ಸಂಪ್ಯ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.