ಕಿಲೋಗೆ ೨೯ ರೂ. ಬೆಲೆಯ ‘ಭಾರತ್ ಅಕ್ಕಿ’ ವಿತರಣೆಗೆ ಚಾಲನೆ

ನವದೆಹಲಿ: ಬೆಲೆಯೇರಿಕೆ ಯಿಂದ ತತ್ತರಿಸುತ್ತಿರುವ ಜನರಿಗೆ ಪರಿಹಾರ ನೀಡಲು ಕೇಂದ್ರ ಸರಕಾರದ ಮಹತ್ವದ ‘ಭಾರತ್ ಅಕ್ಕಿ’ (ರೈಸ್) ವಿತರಣಾ ಯೋಜನೆಗೆ ಇಂದಿನಿಂದ ಚಾಲನೆ ನೀಡಲಾಗಿದೆ. ಆಹಾರ ಧಾನ್ಯಗಳನ್ನು ಕಡಿಮೆ ಬೆಲೆಯಲ್ಲಿ ಜನಸಾಮಾನ್ಯರಿಗೆ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಈ ಮಹತ್ವದ ಹೆಜ್ಜೆ ಇಟ್ಟಿದೆ.

ಈ ಮಹತ್ವದ ಯೋಜನೆಯಾದ ‘ಭಾರತ್ ರೈಸ್’ ಯೋಜನೆಯಡಿ ಕಿಲೋ ಒಂದಕ್ಕೆ ಕೇವಲ ೨೯ ರೂಪಾಯಿಗೆ ಜನ ಸಾಮಾನ್ಯರಿಗೆ ಅಕ್ಕಿ ವಿತರಿಸಲಾಗುವುದು. ಅಕ್ಕಿ ಬೆಲೆಯಲ್ಲಿ ಕಳೆದ ವರ್ಷದಿಂದಲೇ ಶೇ. ೧೫ರಷ್ಟು ಏರಿಕೆ ಉಂಟಾಗಿದ್ದು, ಅದನ್ನು ತಗ್ಗಿಸುವ ಉದ್ದೇಶದಿಂದ ಕೇಂದ್ರ ಸರಕಾರ ಇಂತಹ ಮಹತ್ವದ ತೀರ್ಮಾನಕ್ಕೆ ಬಂದಿದೆ.

ಈ ರಿಯಾಯಿತಿ ದರದ ಅಕ್ಕಿಯನ್ನು ೫ ಕೆಜಿ ಮತ್ತು ೧೦ ಕೆಜಿ ಪ್ಯಾಕ್‌ಗಳಲ್ಲಿ ನೀಡಲಾಗುವುದು. ಕೇಂದ್ರ ಆಹಾರ ಖಾತೆ ಸಚಿವ ಪಿಯೂಷ್ ಗೋಯಲ್ ಅವರು ದಿಲ್ಲಿಯ ಕರ್ತವ್ಯ ಪಥದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಕ್ಕಿ ವಿತರಣೆಗೆ ವಿದ್ಯುಕ್ತ ಚಾಲನೆ ನೀಡಿ ದರು. ಈ ಯೋಜನೆ ಪ್ರಕಾರ ಮೊದಲ ಹಂತದಲ್ಲಿ ಐದು ಲಕ್ಷ ಟನ್ ‘ಭಾರತ್ ರೈಸ್’ ಮಾರಾಟ ಮಾಡಲಾಗುವುದು. ನ್ಯಾಷನಲ್ ಅಗ್ರಿಕಲ್ಚರಲ್ ಕೋ-ಪರೇಟಿವ್ ಮಾರ್ಕೆಟಿಂಗ್ ಫೆಡರೇಷನ್ ಆಫ್ ಇಂಡಿಯಾ (ನಾಫೆಡ್) ಮತ್ತು ನ್ಯಾಷನಲ್ ಕೋ-ಪರೇಟಿವ್ ಕನ್ಸ್ಯೂಮರ್ ಫೆಡರೇಷನ್ ಆಫ್ ಇಂಡಿಯಾ (ಎನ್‌ಸಿಸಿಎಫ್) ಮೂಲಕ ಈ ಅಕ್ಕಿ ಮಾರಾಟ ಮಾಡಲಾಗುವುದು.

ಕೇರಳದಲ್ಲಿ ಭಾರತ್ ಅಕ್ಕಿ ವಿತರಣೆ ಗಾಗಿ ೨೦೦ ಔಟ್‌ಲೆಟ್ (ವಿತರಣಾ ಕೇಂದ್ರ)ಗಳನ್ನು ಸಜ್ಜೀಕರಿಸ ಲಾಗಿದೆ. ಇದರಂತೆ ನೋಂದಾವಣೆ ನಡೆಸಲಾದ ಸೊಸೈಟಿಗಳು ಮತ್ತು ಖಾಸಗಿ ಗೋದಾ ಮುಗಳಲ್ಲಾಗಿ ಇದರ ವಿತರಣಾ ಕೇಂದ್ರ ಆರಂಭಿಸಲಾಗಿದೆ.

‘ಭಾರತ್ ರೈಸ್’ ವಿತರಣೆಯ ಪೂರ್ವಭಾವಿಯಾಗಿ ತೃಶೂರು ವಡಕ್ಕುಂನಾಥ ದೇವಸ್ಥಾನ ಪರಿಸರದಲ್ಲಿ  ನಿನ್ನೆ ನಡೆದ ಸಮಾರಂಭದಲ್ಲಿ ಈ ಅಕ್ಕಿ ಹೇರಿದ ವಾಹನಗಳಿಗೆ ಫ್ಲಾಗ್ ಆಫ್ ನೀಡಲಾಗಿದೆ. ಒಂದೇ ಬಾರಿ ೧೦ ಕಿಲೋ ಪಡೆಯಬಹುದಾಗಿದೆ. ಇದಕ್ಕೆ ರೇಶನ್ ಕಾರ್ಡ್ ಹಾಜರುಪಡಿಸುವ ಅಗತ್ಯವಿಲ್ಲ. ಈ ಅಕ್ಕಿಯನ್ನು ಇಂದಿನಿಂದ ರಾಜ್ಯದ ಇತರ ಎಲ್ಲಾ ಕೇಂದ್ರಗಳಿಗೂ ಪೂರೈಸಲಾಗುತ್ತಿದೆ.  ಕೇರಳದಲ್ಲಿ ಅಗತ್ಯವೆನಿಸಿದ್ದಲ್ಲಿ ಭಾರತ್ ಅಕ್ಕಿ ಮಾರಾಟಕ್ಕಾಗಿ ಇನ್ನಷ್ಟು ಹೆಚ್ಚು ವಿತರಣಾ ಕೇಂದ್ರಗಳನ್ನು ಆರಂಭಿಸಲಾಗುವುದೆಂದು ಎನ್‌ಸಿಸಿಎಫ್‌ನ ಕೊಚ್ಚಿ ಘಟಕದ ಮೆನೇಜರ್ ಸಿ.ಕೆ. ರಾಜನ್ ತಿಳಿಸಿದ್ದಾರೆ. ಆನ್‌ಲೈನ್ ಮೂಲಕವೂ ಅಕ್ಕಿ ಖರೀದಿಸ ಬಹುದೆಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page