ಕುಂಜತ್ತೂರು ನಿವಾಸಿ ಹೃದಯಘಾತದಿಂದ ಖತ್ತರ್‌ನಲ್ಲಿ ನಿಧನ
ಮಂಜೇಶ್ವರ: ಕುಂಜತ್ತೂರು ಸಣ್ಣಡ್ಕ ನಿವಾಸಿ ದಿ| ಅಬ್ದುಲ್ಲರ ಪುತ್ರ ಖತ್ತರ್‌ನಲ್ಲಿ ಉದ್ಯೋಗದಲ್ಲಿದ್ದ ಅಬ್ದುಲ್ ರಹಿಮಾನ್ ಅಶ್ರಫ್ [42] ಹೃದಯಘಾತದಿಂದ ನಿಧನ ಹೊಂದಿರುವುದಾಗಿ ಬುಧವಾರ ರಾತ್ರಿ ಮನೆಯವರಿಗೆ ಮಾಹಿತಿ ಲಭಿಸಿದಿದೆ. ಕಳೆದ ಎರಡೂವರೆ ವರ್ಷಗಳಿಂದ ಕತ್ತ್ರ್‌ನಲ್ಲಿ ವಿಮಾನ ನಿಲ್ದಾಣದಲ್ಲಿ ಕಾರ್ಗೋ ಸೆಕ್ಷನ್‌ನಲ್ಲಿ ಉದ್ಯೋಗಿ ಯಾಗಿದ್ದರು. ಆರು ತಿಂಗಳ ಹಿಂದೆಯಷ್ಟೆ ಊರಿಗೆ ತಲುಪಿದ್ದರು. ದುಬೈಯಲ್ಲಿರುವ ಸಹೋದರ ಪೋನ್ ಕರೆ ಮಾಡಿದರೂ ತೆಗೆಯದ ಕಾರಣ ಖತ್ತರ್‌ನಲ್ಲಿರುವ ಸಂಬAಧಿಕರು, ಸ್ನೇಹಿತರಿಗೆ ಮಾಹಿತಿ ತಿಳಿಸಿದ್ದಾರೆ. ಕೊಠಡಿಗೆ ಹೋಗಿ ನೋಡಿದಾಗ ಮೃತಪಟ್ಟ ಸ್ಥಿತಿಯಲ್ಲಿ ಕಂಡುಬAದಿದೆ. ಸಾವಿಗೆ ಹೃದಯಘಾತ ಕಾರಣವೆಂದು ಸಂಬAಧಿಕರು ತಿಳಿಸಿದ್ದಾರೆ. ಮೃತ ದೇಹದ ಅಂತ್ಯಸAಸ್ಕಾರ ಖತ್ತರ್‌ನಲ್ಲಿ ನಡೆಯಿತು. ಸಂಬAಧಿಕರು,ಸ್ನೇಹಿತರು ಭಾಗವಹಿಸಿದರು.