ಕುಂಜತ್ತೂರು ಶಾಲೆ ಹಳೆ ವಿದ್ಯಾರ್ಥಿಗಳ ಸಂಗಮ ನಾಳೆ
ಮಂಜೇಶ್ವರ: ಕುಂಜತ್ತೂರು ಪ್ರೌಢ ಶಾಲೆಯಲ್ಲಿ 1992-93 ಶೈಕ್ಷಣಿಕ ವರ್ಷದಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳು ಮತ್ತೆ ಒಂದೇ ವೇದಿಕೆಯಲ್ಲಿ ಸೇರುವ ನೆನಪುಗಳ ಜಾತ್ರೆ ನಾಳೆ ಬೆಳಿಗ್ಗೆ 10 ಗಂಟೆಗೆ ಕುಂಜತ್ತೂರು ಶಾಲೆಯಲ್ಲಿ ನಡೆಯಲಿರುವುದಾಗಿ ಸಂಬAಧಪಟ್ಟವರು ತಿಳಿಸಿದ್ದಾರೆ.
ಬೆಳಿಗ್ಗೆ 10 ಗಂಟೆಯಿAದ ಶಾಲಾ ನೆನಪುಗಳನ್ನು ಮತ್ತೊಮ್ಮೆ ಹಳೆ ವಿದ್ಯಾರ್ಥಿಗಳು ಮೆಲುಕಾಡಲಿದ್ದಾರೆ. ಕಾಸರಗೋಡು ಸರಕಾರಿ ಕಾಲೇಜಿನ ಅಸಿಸ್ಟೆಂಟ್ ಪ್ರೊ. ಸುಜಾತ ಎಸ್.ರವರ ಅಧ್ಯಕ್ಷತೆಯಲ್ಲಿ ನಡೆಯುವ ಸಂಗಮವನ್ನು ಡಾ| ಅಬ್ದುಲ್ ಮನ್ಸೂರ್ ಉದ್ಘಾಟಿಸಲಿದ್ದಾರೆ. ಮುಖ್ಯೋಪಾಧ್ಯಾಯ ಬಾಲಕೃಷ್ಣ ಜಿ. ಹಾಗೂ ಶಾಲಾ ಪೂರ್ವ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ರಹ್ಮಾನ್ ಉದ್ಯಾವರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶಾಲಾ ಹಳೆ ವಿದ್ಯಾರ್ಥಿಗಳಾದ ಇಸ್ಮಾಯಿಲ್ ಎಂ ಪಿ, ಅಬ್ದುಲ್ ನಾಝರ್ ಮಾತನಾಡುವರು.