ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ಕ್ಷೇತ್ರದಲ್ಲಿ ಸಾರ್ವಜನಿಕ ಸೀಯಾಳ ಅಭಿಷೇಕ, ಅಯೋಧ್ಯೆಯ ತೀರ್ಥ ವಿತರಣೆ 21ರಂದು
ಮಂಜೇಶ್ವರ: ವಿಶ್ವಹಿಂದೂ ಪರಿಷತ್ ಮಂಜೇಶ್ವರ ಪ್ರಖಂಡ ಇದರ ನೇತೃತ್ವದಲ್ಲಿ ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಸಾರ್ವಜನಿಕ ಸೀಯಾಳ ಅಭಿಷೇಕ ಮತ್ತು ಅಯೋಧ್ಯೆಯಲ್ಲಿ ಶ್ರೀರಾಮ ದೇವರಿಗೆ ಅಭಿಷೇಕವಾದ ತೀರ್ಥ ವಿತರಣೆ ರಾಮೋತ್ಸವ ಹಾಗೂ ಸತ್ಸಂಗ ಸಭೆ ಈ ತಿಂಗಳ 21ರಂದು ಶ್ರೀ ಕ್ಷೇತ್ರದಲ್ಲಿ ನಡೆಯಲಿದೆ. ಬೆಳಿಗ್ಗೆ 6ಕ್ಕೆ ಶ್ರೀ ದೇವರಿಗೆ ಸಾರ್ವಜನಿಕ ಸೀಯಾಳ ಅಭಿಷೇಕ, 7.30ಕ್ಕೆ ಮಹಾಪೂಜೆ, 8.30ಕ್ಕೆ ಅಯೋಧ್ಯೆಯ ತೀರ್ಥಾ ವಿತರಣೆ ಬಳಿಕ ನಡೆಯುವ ಸತ್ಸಂಗ ಸಭೆಯಲ್ಲಿ ವಿಶ್ವಹಿಂದೂ ಪರಿಷತ್ ಮಂಜೇಶ್ವರ ಪ್ರಖಂಡ ಅಧ್ಯಕ್ಷ ಕೃಷ್ಣಶಿವಕೃಪಾ ಪ್ರಾಸ್ತಾವಿಕ ಭಾಷಣ ಮಾಡುವರು. ಶ್ರೀ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಸಂಘಟನೆಯ ಮುಖಂಡರಾದ ಜಯದೇವ ಖಂಡಿಗೆ, ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು, ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಸುರೇಶ್ ಶೆಟ್ಟಿ ಪರಂಕಿಲ, ಮೀರಾ ಆಳ್ವಾ, ಯಾದವ ಕೀರ್ತೇಶ್ವರ, ಸೌಮ್ಯ ಪ್ರಕಾಶ್ ಭಾಗವಹಿಸುವರು.