ಕುಂಬಳೆಯಲ್ಲಿ ಕೆ.ಟಿ. ಜಯಕೃಷ್ಣನ್ ಮಾಸ್ತರ್ ಸಂಸ್ಮರಣೆ
ಕುಂಬಳೆ: ದಿವಂಗತ ಕೆ.ಟಿ. ಜಯಕೃಷ್ಣನ್ ಮಾಸ್ತರ್‌ರ ಬಲಿದಾನ ದಿನವನ್ನು ಕುಂಬಳೆ ಬಿಜೆಪಿ ವತಿಯಿಂದ ಮಡ್ವ ವಾರ್ಡ್‌ನಲ್ಲಿ ನಡೆಸಲಾಯಿತು. ಉತ್ತರ ವಲಯ ಅಧ್ಯಕ್ಷ ಪ್ರದೀಪ್ ಆರಿಕ್ಕಾಡಿ ಉದ್ಘಾಟಿಸಿದರು. ಜಿಲ್ಲಾ ಸಮಿತಿ ಸದಸ್ಯ ಶಿವನಾಥ್, ಬೂತ್ ಅಧ್ಯಕ್ಷ ಪಿ.ಕೆ. ಕೃಷ್ಣ, ವಿನೋದ್ ಪಂಜಿಕಲ್ಲು, ಸದಸ್ಯರಾದ ಪ್ರಸಾದ್ ಮಡ್ವ, ವಸಂತ ಪಂಜಿಕಲ್ಲು, ದೀಕ್ಷಿತ್ ಚೆಕ್‌ಪೋಸ್ಟ್, ಬೋಜರಾಜ್ ಬಜಪೆ, ಕೃಷ್ಣ ಮಡ್ವ ಭಾಗವಹಿಸಿದರು.