ಕುಂಬಳೆಯಲ್ಲಿ ಬೀದಿ ನಾಯಿಗಳ ಹಾವಳಿ: ಜನರಲ್ಲಿ ಆತಂಕ
ಕುಂಬಳೆ: ಕುಂಬಳೆ-ಬದಿಯಡ್ಕ ರಸ್ತೆಯಲ್ಲಿ ಕುಂಬಳೆ ಚರ್ಚ್ ಸಮೀಪ ಬೀದಿನಾಯಿಗಳ ಉಪಟಳ ತೀವ್ರಗೊಂಡಿರುವುದಾಗಿ ದೂರ ಲಾಗಿದೆ. ರಸ್ತೆಯಲ್ಲಿ ಸಂಚರಿಸುವ ಪಾದಚಾರಿಗಳು ಹಾಗೂ ದ್ವಿಚಕ್ರವಾಹನಗಳನ್ನು ಬೆನ್ನಟ್ಟಿ ಪ್ರಯಾಣಿಕರ ಮೇಲೆ ದಾಳಿ ನಡೆಸುತ್ತಿದ್ದು ಇದರಿಂದ ಸಂಚಾರಕ್ಕೆ ಆತಂಕ ಸೃಷ್ಟಿಯಾಗಿದೆ. ಇದೇ ಪರಿಸರದಲ್ಲಿ ಹತ್ತಕ್ಕಿಂತಲೂ ಹೆಚ್ಚು ಬೀದಿನಾಯಿಗಳು ತಂಗಿದ್ದು, ಅವು ಒಮ್ಮೆಲೆ ಪ್ರಯಾಣಿಕರ ಮೇಲೆರ ಗುತ್ತಿವೆ. ನಿನ್ನೆ ಬೆಳಿಗ್ಗೆ ಬೈಕ್ವೊಂದರ ಸವಾರನ ಮೇಲೆ ಬೀದಿ ನಾಯಿ ಗಳು ದಾಳಿ ನಡೆಸಿದ್ದು, ಇದರಿಂದ ಅವರು ಗಾಯಗೊಂಡಿ ದ್ದಾರೆ. ಕಳೆದ ಹಲವು ದಿನಗಳಿಂದ ಇಲ್ಲಿ ಬೀದಿ ನಾಯಿಗಳು ಆತಂಕ ಸೃಷ್ಟಿಸುತ್ತಿದ್ದು ಇದಕ್ಕೆ ಪರಿಹಾರ ಕಾಣಬೇಕೆಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.