ಕುಂಬಳೆಯಲ್ಲಿ ಶೌಚಾಲಯ ಉದ್ಘಾಟನೆ ೨೫ರಂದು

ಕುಂಬಳೆ: ಪೇಟೆಯಲ್ಲಿ ಶೌಚಾಲಯವಿಲ್ಲದ ಕಾರಣ ಪೇಟೆಗೆ ತಲುಪುವ ಮಂದಿ ಅನುಭವಿಸುವ ಸಂಕಷ್ಟವನ್ನು ಮನಗಂಡು ವಿವಿಧ ಸಂಘ ಸಂಸ್ಥೆಗಳ, ಸಹೃದಯ ವ್ಯಕ್ತಿಗಳಿಂದ ಧನ ಸಹಾಯ ಪಡೆದು ನಿರ್ಮಿಸಿದ ಶೌಚಾಲಯದ ಉದ್ಘಾಟನೆ ಈ ತಿಂಗಳ ೨೫ರಂದು ಬೆಳಿಗ್ಗೆ ೯.೩೦ಕ್ಕೆ ನಡೆಯಲಿದೆ. ಎಂದು ಸೇವಾ ಭಾರತಿ ಕುಂಬಳೆ ಘಟಕ, ಭೂತಸ್ಥಾನ ಸೇವಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಶೌಚಾಲಯವನ್ನು ಹಿರಿಯ ವೈದ್ಯ ಸರ್ವೇಶ್ವರ್ ಭಟ್ ಉದ್ಘಾಟಿಸುವರು. ಆರ್‌ಎಸ್‌ಎಸ್ ಕಣ್ಣೂರು ವಿಭಾಗ ಸಹ ಕಾರ್ಯವಾಹ ಲೋಕೇಶ್ ಜೋಡುಕಲ್ಲು ಮಾತನಾಡುವರು. ಕಲಾರತ್ನ ಶಂನಾಡಿಗ, ಸೇವಾ ಭಾರತಿ ಜಿಲ್ಲಾ ಅಧ್ಯಕ್ಷ ಸಿ.ಕೆ. ವೇಣುಗೋಪಾಲ್, ಭೂತಸ್ಥಾನ ಸೇವಾ ಸಮಿತಿ ಅಧ್ಯಕ್ಷ ಸಂಜೀವ ಭಂಡಾರಿ ಭಾಗವಹಿಸುವರು.

You cannot copy contents of this page